ADVERTISEMENT

ಸಾರ್ವಜನಿಕ ಪ್ರದೇಶದಲ್ಲಿ ನಮಾಜ್‌: ಉತ್ತರ ಪ್ರದೇಶದಲ್ಲಿ 1,700 ಮಂದಿ ಮೇಲೆ ಎಫ್‌ಐಆರ್‌

ತ್ತರ ಪ್ರದೇಶದ ಕಾನ್ಪುರ ಹಾಗೂ ಅಲೀಗಢ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅಲ್ವಿದಾ ಹಾಗೂ ಈದ್‌–ಉಲ್‌–ಫಿತ್ರ್‌ ನಮಾಜ್‌ ನಿರ್ವಹಿಸಿದವರ ವಿರುದ್ಧ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2023, 6:32 IST
Last Updated 28 ಏಪ್ರಿಲ್ 2023, 6:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಕಾನ್ಪುರ ಹಾಗೂ ಅಲೀಗಢ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅಲ್ವಿದಾ ಹಾಗೂ ಈದ್‌–ಉಲ್‌–ಫಿತ್ರ್‌ ನಮಾಜ್‌ ನಿರ್ವಹಿಸಿದ ಗುರುತಿಸಲಾಗದ ನೂರಾರು ಮಂದಿಯ ಮೇಲೆ ಪೊಲೀಸರು ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಕ್ರಮವಾ‌ಗಿ ಏ. 21 ಹಾಗೂ ಏ. 22 ರಂದು ಅಲ್ವಿದಾ ಹಾಗೂ ಈದ್‌ ನಮಾಜ್‌ ನಿರ್ವಹಿಸಲಾಗಿತ್ತು.

ಈದ್‌–ಉಲ್‌–ಫಿತ್ರ್‌ನ ದಿನ ಬಡೀ ಈದ್ಗಾ, ಬೆನಜ್‌ಹಬರ್‌, ಜಾಜ್ಮವು ಹಾಗೂ ಬಾಬುಪೂರ್ವ ಮುಂತಾದ ಕಡೆ ರಸ್ತೆಯಲ್ಲಿ ನಮಾಜ್‌ ನಿರ್ವಹಿಸಿದ 1700 ಮಂದಿ ಮೇಲೆ ಕಾನ್ಪುರ ಪೊಲೀಸರು 3 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ADVERTISEMENT

ಬೆನಜ್‌ಹಬರ್‌ನಲ್ಲಿ 1500 ಮಂದಿಯ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಜಾಜ್ಮವುನಲ್ಲಿ 200–300 ಮಂದಿಯ ವಿರುದ್ಧ ಹಾಗೂ ಬಾಬುಪೂರ್ವದಲ್ಲಿ 30–40 ಮಂದಿಯೆ ಮೇಲೆ ಎಫ್ಐಆರ್‌ ದಾಖಲಾಗಿದೆ. ಈದ್ಗಾ ಸಮಿತಿಯ ಸದಸ್ಯರ ವಿರುದ್ಧ ಆರೋಪ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.