ADVERTISEMENT

ಚೀನಾದಲ್ಲಿ 900 ವರ್ಷ ಹಳೆಯದಾದ ಮರದ ಸೇತುವೆಗೆ ಬೆಂಕಿ: ತನಿಖೆಗೆ ಆದೇಶ

ಏಜೆನ್ಸೀಸ್
Published 8 ಆಗಸ್ಟ್ 2022, 13:21 IST
Last Updated 8 ಆಗಸ್ಟ್ 2022, 13:21 IST
ಚೀನಾದ ವಾನ್‌ ಆನ್ ಮರದ ಸೇತುವೆಯು ಬೆಂಕಿಗೆ ಆಹುತಿಯಾಗಿರುವ ವಿಡಿಯೊದ ದೃಶ್ಯ –ಎ‍ಪಿ ಚಿತ್ರ
ಚೀನಾದ ವಾನ್‌ ಆನ್ ಮರದ ಸೇತುವೆಯು ಬೆಂಕಿಗೆ ಆಹುತಿಯಾಗಿರುವ ವಿಡಿಯೊದ ದೃಶ್ಯ –ಎ‍ಪಿ ಚಿತ್ರ   

ಬೀಜಿಂಗ್‌: ಚೀನಾದ ಆಗ್ನೇಯ ಭಾಗದಲ್ಲಿದ್ದ 900 ವರ್ಷ ಹಳೆಯದಾದ ಮರದ ಸೇತುವೆಯು ಬೆಂಕಿ ಅವಘಡಕ್ಕೆ ತುತ್ತಾದ ಕಾರಣ ಕುರಿತು ಚೀನಾ ತನಿಖೆಗೆ ಆದೇಶಿಸಿದೆ.

ಕಲ್ಲಿನ ಐದು ಸ್ತಂಭಗಳ ಮೇಲೆ ನಿಂತಿದ್ದ ಈ ಮರದ ಸೇತುವೆಯು 98 ಮೀಟರ್‌ ಉದ್ದವಿತ್ತು. ಹಲವು ಬಾರಿ ಈ ಸೇತುವೆಯನ್ನು ಮರು ನಿರ್ಮಾಣ ಮಾಡಲಾಗಿದ್ದು, ಕಡೆಯದಾಗಿ 1932ರಲ್ಲಿ ಮರು ನಿರ್ಮಾಣಗೊಳಿಸಲಾಗಿತ್ತು.

ಶನಿವಾರ ರಾತ್ರಿ ಬೆಂಕಿ ಅವಘಡ ನಡೆದಿದ್ದು ವಾನ್‌ ಆನ್‌ ಸೇತುವೆಗೆ ಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿತ್ತು. ಅವಘಡದಲ್ಲಿ ಯಾರಿಗೂ ಪೆಟ್ಟಾಗಿರಲಿಲ್ಲ. ಈ ಸೇತುವೆಗೆ ಮರದ ಚಾವಣಿ ಇತ್ತು. ಮೂಲ ಸೇತುವೆ ಸೊಂಗ್‌ ಆಡಳಿತಾವಧಿಯಲ್ಲಿ ನಿರ್ಮಾಣವಾಗಿತ್ತು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.