ಬಾಲೇಶ್ವರ (ಒಡಿಶಾ):ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವಿರುವ ಅಗ್ನಿ–3 ಕ್ಷಿಪಣಿಯನ್ನು ಇದೇ ಮೊದಲ ಬಾರಿ ರಾತ್ರಿಯಲ್ಲಿ ಪರೀಕ್ಷಾರ್ಥವಾಗಿ ಉಡಾಯಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
3,500 ಕಿ.ಮೀ. ದೂರದವರೆಗಿನ ದಾಳಿ ವ್ಯಾಪ್ತಿ ಹೊಂದಿರುವ ಈ ಕ್ಷಿಪಣಿಯು ಈಗಾಗಲೇ ಸೇನೆಗೆ ನಿಯೋಜನೆಗೊಂಡಿದೆ. ಸೇನಾಪಡೆಗಳೇ ಶನಿವಾರದ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿವೆ. 1.5 ಟನ್‌ನಷ್ಟು ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ಕ್ಷಿಪಣಿಯನ್ನು ರಾತ್ರಿ ವೇಳೆ ದಾಳಿ ನಡೆಸಲು ಬಳಸಬಹುದೇ ಎಂದು ಪರೀಕ್ಷಿಸಲಾಗಿದೆ. ಪರೀಕ್ಷೆ ಯಶಸ್ವಿಯಾಗಿದೆಎಂದು ಮೂಲಗಳು ವಿವರಿಸಿವೆ.
ಈಚೆಗಷ್ಟೇ ಅಗ್ನಿ–2 ಕ್ಷಿಪಣಿಯ ರಾತ್ರಿ ಉಡಾವಣೆ ಪರೀಕ್ಷೆಯನ್ನೂ ಯಶಸ್ವಿಯಾಗಿ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.