ಹಡಗು
ತಿರುವನಂತಪುರಂ (ಪಿಟಿಐ): ಚೀನಾದಿಂದ ಕ್ರೇನ್‌ಗಳನ್ನು ಹೊತ್ತುತಂದ ಮೊದಲ ಹಡಗು ‘ಝೆನ್ ಹುಅ 15’ ಗುರುವಾರ ಇಲ್ಲಿನ ವಿಳಿಂಜಂ ಅಂತರರಾಷ್ಟ್ರೀಯ ಬಂದರು ಪ್ರವೇಶಿಸಿತು. ಟಗ್ ಬೋಟ್‌ಗಳಿಂದ ಜಲನಮನ ಸಲ್ಲಿಸುವ ಮೂಲಕ ಹಡಗನ್ನು ಬರಮಾಡಿಕೊಳ್ಳಲಾಯಿತು.
ಬೃಹತ್ ಹಡಗಿನಿಂದ ಕ್ರೇನ್‌ಗಳನ್ನು ಭಾನುವಾರ ಬಂದರಿಗೆ ಇಳಿಸಲಾಗುವುದು. ಅಂದು ಈ ಸಂಬಂಧ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಬಂದರು ಸಚಿವ ಸರ್ಬಾನಂದ ಸೊನೊವಾಲ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ ಅಂತ್ಯದಲ್ಲಿ ಚೀನಾದಿಂದ ಹಡಗು ನಿರ್ಗಮಿಸಿತ್ತು. ಅ.4ಕ್ಕೆ ವಿಳಿಂಜಂ ಬಂದರಿಗೆ ಬರಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ವಿಳಂಬವಾಯಿತು. ಸಮುದ್ರ ವ್ಯಾಪ್ತಿಯಲ್ಲಿ ಭಾರತದ ಗಡಿ ಪ್ರವೇಶಿಸಿ ಗುಜರಾತ್‌ನ ಮುಂದ್ರಾ ಬಂದರಿಗೆ ತೆರಳಿ, ಅಲ್ಲಿ ಕೆಲವು ಕ್ರೇನ್‌ಗಳನ್ನು ಇಳಿಸಲಾಗಿತ್ತು. ಬಳಿಕ ವಿಳಿಂಜಂಗೆ ತಲುಪಿತು.
ವಿಳಿಂಜಂ ಬಂದರನ್ನು ಅದಾನಿ ಸಮೂಹ ನೆರವಿನಲ್ಲಿ ಖಾಸಗಿ–ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಇದು, ಪೂರ್ಣ ಕಾರ್ಯಾರಂಭ ಮಾಡಿದ ಬಳಿಕ ಅತಿದೊಡ್ಡ ಬಂದರು ಎಂಬ ಹಿರಿಮೆಗೆ ಪಾತ್ರವಾಗಲಿದೆ. ಬಂದರು ಸ್ಥಾಪನೆಗೆ ಸ್ಥಳೀಯ ಮೀನುಗಾರರು ವಿರೋಧಿಸಿದ್ದರು. ಇದು, ಹಿಂಸಾಚಾರ ಘಟನೆಗೂ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.