ಸಾಂದರ್ಭಿಕ ಚಿತ್ರ
ಗುವಾಹಟಿ: ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಬಾಂಗ್ಲಾದೇಶದ ಐದು ಮಂದಿ ನುಸುಳುಕೋರರನ್ನು ಇಂದು (ಗುರುವಾರ) ಬಂಧಿಸಿ ಗಡೀಪಾರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಒಳನುಸುಳುವಿಕೆ ವಿರುದ್ಧದ ನಿರ್ಣಾಯಕ ಕ್ರಮದಲ್ಲಿ ಶ್ರೀಭೂಮಿ ಪೊಲೀಸರು ಐದು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿ, ಗಡೀಪಾರು ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ನುಸುಳುಕೋರರನ್ನು ಮೊಹಮ್ಮದ್ ಇಮಾನ್ ಮೀರಾ, ಮೊಹಮ್ಮದ್ ನಯೀಮ್ ಅಹ್ಮದ್, ಮಿಯಾಝಾಕಿ ಮೊಹಮ್ಮದ್ ರಸೆಲ್, ಅಬ್ದುಲ್ ಕಲಾಂ ಮಿಯಾ ಮತ್ತು ಮೊಹಮ್ಮದ್ ಮುನ್ನಾ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏಳು ತಿಂಗಳಲ್ಲಿ 320ಕ್ಕೂ ಹೆಚ್ಚು ಒಳನುಸುಳುಕೋರರನ್ನು ಗಡೀಪಾರು ಮಾಡಲಾಗಿದೆ. ಯಾವುದೇ ವ್ಯಕ್ತಿ ಅಕ್ರಮವಾಗಿ ರಾಜ್ಯವನ್ನು ಪ್ರವೇಶಿಸದಂತೆ ಅಸ್ಸಾಂ ಪೊಲೀಸರು ಗಡಿಯುದ್ದಕ್ಕೂ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.