ADVERTISEMENT

ಪಾಕಿಸ್ತಾನದಲ್ಲಿ ಪೊಲೀಸ್ ಶಿಬಿರದ ಮೇಲೆ ಡಕಾಯಿತರ ದಾಳಿ: ಐವರ ಹತ್ಯೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 15:52 IST
Last Updated 6 ನವೆಂಬರ್ 2022, 15:52 IST
.
.   

ಕರಾಚಿ:ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಪೊಲೀಸ್‌ ಶಿಬಿರವೊಂದರ ಮೇಲೆ ಶನಿವಾರ ದಾಳಿ ನಡೆಸಿದ 150 ಜನರಿದ್ದ ಡಕಾಯಿತರ ತಂಡ, ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಸಹಿತ ಐವರು ಪೊಲೀಸರನ್ನು ಕೊಂದು ಹಾಕಿದೆ.

ಡಕಾಯಿತರು ಈಗಲೂ ಹಲವು ಪೊಲೀಸರನ್ನು ಒತ್ತೆಯಾಗಿ ಇರಿಸಿದ್ದು, ಅವರನ್ನು ಬಿಡಿಸಿಕೊಳ್ಳಲು ಮತ್ತು ಮೃತದೇಹಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದು ಘೋಟ್ಕಿ ವಲಯದ ಡಿಐಜಿ ಜಾವೇದ್ ಜಿಸ್ಕಾನಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಪೊಲೀಸ್ ಠಾಣೆ ಮತ್ತು ರಕ್ಷಣಾ ಪಡೆಗಳ ಮೇಲಿನ ದಾಳಿ ಸಾಮಾನ್ಯವಾಗಿದ್ದು, ಕಳೆದ ತಿಂಗಳು ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದಲ್ಲಿಇದೇ ರೀತಿಯಲ್ಲಿ ದಾಳಿ ನಡೆದಿತ್ತು, ಆಗ ಇಬ್ಬರು ಪೊಲೀಸರು ಮೃತಪಟ್ಟಿದ್ದರು ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.