ADVERTISEMENT

ದುರಂತಕ್ಕೀಡಾದ ವಿಮಾನದಲ್ಲಿ 2 ಗಂಟೆ ಮೊದಲು ಪ್ರಯಾಣಿಸಿದ್ದವರು ಕಂಡದ್ದು, ಹೇಳಿದ್ದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2025, 12:57 IST
Last Updated 12 ಜೂನ್ 2025, 12:57 IST
<div class="paragraphs"><p>ಗುಜರಾತ್‌ನ ಅಹಮದಾಬಾದ್‌ನ ಮೇಘನಿನಗರದಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಹಾನಿಗೀಡಾದ ಬಿ.ಜೆ. ವೈದ್ಯಕೀಯ ಕಾಲೇಜಿನ ವೈದ್ಯರ ವಸತಿ ಸಮುಚ್ಚಯ ಕಟ್ಟಡದಲ್ಲಿ ನಡೆದ ಶೋಧ ಕಾರ್ಯ</p></div>

ಗುಜರಾತ್‌ನ ಅಹಮದಾಬಾದ್‌ನ ಮೇಘನಿನಗರದಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಹಾನಿಗೀಡಾದ ಬಿ.ಜೆ. ವೈದ್ಯಕೀಯ ಕಾಲೇಜಿನ ವೈದ್ಯರ ವಸತಿ ಸಮುಚ್ಚಯ ಕಟ್ಟಡದಲ್ಲಿ ನಡೆದ ಶೋಧ ಕಾರ್ಯ

   

ಪಿಟಿಐ ಚಿತ್ರ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ಮದ್ಯಾಹ್ನ ಅಪಘಾತಕ್ಕೀಡಾದ ಏರ್‌ ಇಂಡಿಯಾ ವಿಮಾನದಲ್ಲಿ 2 ಗಂಟೆ ಮೊದಲು ಪ್ರಯಾಣಿಸಿದ್ದೆ. ಅಲ್ಲಿನ ಅವ್ಯವಸ್ಥೆಯ ದೃಶ್ಯಗಳನ್ನು ಸೆರೆಹಿಡಿದು ಏರ್‌ ಇಂಡಿಯಾಗೆ ಕಳುಹಿಸಬೇಕೆಂದಿದ್ದೆ. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ ಎಂದು ಪ್ರಯಾಣಿಕರೊಬ್ಬರು ಆಘಾತ ವ್ಯಕ್ತಪಡಿಸಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಆಕಾಶ್ ವತ್ಸಾ ಎಂಬ ಹ್ಯಾಂಡಲ್‌ನಿಂದ ಕೆಲವೊಂದು ಚಿತ್ರಗಳ ಸಹಿತ ತಮ್ಮ ಅನುಭವ ಹಂಚಿಕೊಂಡಿರುವ ಪ್ರಯಾಣಕರೊಬ್ಬರು, ಅದರ ದುಸ್ಥಿತಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘AI-171 ವಿಮಾನ ಮೂಲಕ ದೆಹಲಿಯಿಂದ ಅಹಮದಾಬಾದ್‌ಗೆ ಗುರುವಾರ ಬೆಳಿಗ್ಗೆ ಪ್ರಯಾಣಿಸಿದ್ದೆ. ಕೆಲವೊಂದು ಅವ್ಯವಸ್ಥೆಯನ್ನು ಹಂಚಿಕೊಂಡಿದ್ದೇನೆ. ಇಲ್ಲಿ ಎಲ್ಲವೂ ಸರಿ ಇಲ್ಲ ಎಂದೆನಿಸುತ್ತಿತ್ತು. ಹವಾನಿಯಂತ್ರಿತ ಸಾಧನ, ಮನರಂಜನಾ ಪರದೆ ನಿರ್ವಹಿಸುವ ರಿಮೋಟ್‌ ಕೆಲಸ ಮಾಡುತ್ತಿರಲಿಲ್ಲ. ಹೀಗೆ ಹಲವು ಅವ್ಯವಸ್ಥೆಗಳನ್ನು ದೃಶ್ಯ ಸಹಿತ ಪಟ್ಟಿ ಮಾಡಿದ್ದೆ’ ಎಂದು ಅವರು ಹೇಳಿದ್ದಾರೆ.

‘ಇವೆಲ್ಲವನ್ನೂ ಏರ್‌ ಇಂಡಿಯಾಗೆ ಟ್ವಿಟ್‌ ಮಾಡಬೇಕೆಂದುಕೊಂಡಿದ್ದೆ. ಅವುಗಳೊಂದಿಗೆ ಹೆಚ್ಚಿನ ಮಾಹಿತಿ ನೀಡಲು ಬಯಸಿದ್ದೆ. ಈಗಲೂ ನಾನು ಮಾಹಿತಿ ನೀಡಲು ಸಿದ್ಧ. ನನ್ನ ಎಕ್ಸ್‌ ಖಾತೆಯನ್ನು ಸಂಪರ್ಕಿಸಿ’ ಎಂದು ಪ್ರಯಾಣಿಕ ಬರೆದುಕೊಂಡಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಟೇಕ್‌ ಆಫ್‌ ಆದ ಕೆಲವೇ ಹೊತ್ತಿನಲ್ಲಿ ಏರ್‌ ಇಂಡಿಯಾ ವಿಮಾನ ಪತನವಾಗಿದೆ. ದುರಂತ ವಿಮಾನದಲ್ಲಿ ಸುಮಾರು 242 ಪ್ರಯಾಣಿಕರು ಇದ್ದರು ಎಂದೆನ್ನಲಾಗಿದೆ. ಏರ್‌ ಇಂಡಿಯಾಗೆ ಸೇರಿದ AI171 ವಿಮಾನವು ಗುರುವಾರ ಮಧ್ಯಾಹ್ನ 1.38ಕ್ಕೆ ಅಹಮದಾಬಾದ್ ವಿಮಾನನಿಲ್ದಾಣದಿಂದ ಟೇಕ್‌ಆಫ್‌ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.