
ನವದೆಹಲಿ: ‘ಶನಿವಾರ ಸಹ ಸುಮಾರು ಒಂದು ಸಾವಿರ ಮಾರ್ಗಗಳಲ್ಲಿ ಇಂಡಿಗೊ ಸಂಸ್ಥೆಯ ವಿಮಾನ ಹಾರಾಟ ರದ್ದಾಗಲಿದ್ದು, ಡಿಸೆಂಬರ್ 10ರಿಂದ 15ರ ವೇಳೆಗೆ ಸಂಚಾರ ಸಹಜಸ್ಥಿತಿಗೆ ಬರಲಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ.
ಶುಕ್ರವಾರ ಅರ್ಧಕ್ಕಿಂತ ವಿಮಾನಗಳ ಹಾರಾಟ ರದ್ದುಗೊಂಡು ಪ್ರಯಾಣಿಕರಿಗೆ ಅಡಚಣೆ ಉಂಟಾದ ಕುರಿತು ವಿಡಿಯೊ ಸಂದೇಶದಲ್ಲಿ ಕ್ಷಮೆಯಾಚಿಸಿದ್ದಾರೆ.
‘ಕಳೆದ ಕೆಲವು ದಿನಗಳಿಂದ ನಾವು ತೆಗೆದುಕೊಂಡ ಕ್ರಮಗಳು ಸಾಕಾಗುವುದಿಲ್ಲ ಎಂದು ಸಾಬೀತಾಗಿದೆ. ಆದ್ದರಿಂದ, ಎಲ್ಲ ವ್ಯವಸ್ಥೆಗಳು ಹಾಗೂ ವೇಳಾಪಟ್ಟಿಯನ್ನು ಮರುನಿಗದಿಪಡಿಸಲು ಪ್ರಯತ್ನಿಸುತ್ತಿದ್ದೇವೆ ’ ಎಂದು ಹೇಳಿದ್ದಾರೆ.
ಈ ಕ್ರಮಗಳಿಂದ ಶನಿವಾರವೂ ವಿಮಾನ ಹಾರಾಟ ಮಾರ್ಗದ ರದ್ಧತಿ ಸಾವಿರಕ್ಕೂ ಕಡಿಮೆ ಇರಲಿದೆ. ಎಫ್‌ಡಿಟಿಎಲ್ ಜಾರಿಗೆ ಡಿಜಿಸಿಎ ತಾತ್ಕಾಲಿಕ ತಡೆ ನೀಡಿರುವುದು ದೊಡ್ಡಮಟ್ಟದ ಸಹಾಯವಾಗಿದೆ’ ಎಂದು ಎಲ್ಬರ್ಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.