ADVERTISEMENT

ಏರ್ ಇಂಡಿಯಾ ನೌಕರರ ಮುಷ್ಕರ: ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 6:21 IST
Last Updated 8 ನವೆಂಬರ್ 2018, 6:21 IST
   

ಮುಂಬೈ: ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಗುತ್ತಿಗೆ ನೌಕರರುದಿಢೀರ್ ಮುಷ್ಕರಆರಂಭಿಸಿದ್ದರಿಂದ ಮುಂಬೈನಲ್ಲಿ ಏರ್‌ ಇಂಡಿಯಾ ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲವ್ಯತ್ಯಯವಾಗಿತ್ತು.

ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್‌–1 ಮತ್ತು ಟರ್ಮಿನಲ್‌–2ರಲ್ಲಿ ಕೆಲಸ ಮಾಡುವ ಏರ್ ಇಂಡಿಯಾ ಸಂಸ್ಥೆಯ ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದರು. ಇದರಿಂದ ಮುಂಬೈನಿಂದ ಹೊರಡುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತುಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೌಕರರ ಜತೆ ಮಾತುಕತೆ ನಡೆಸಲಾಗುತ್ತಿದ್ದು ಶೀಘ್ರದಲ್ಲೆ ವಿಮಾನಗಳು ಟೇಕ್‌ ಆಪ್‌ ಆಗಲಿವೆ ಎಂದು ಸಂಸ್ಥೆಯ ವಕ್ತಾರರು ಬೆಳಗ್ಗೆ 9 ಗಂಟೆಗೆ ತಿಳಿಸಿದ್ದರು.

ADVERTISEMENT

ವಿಮಾನ ಹಾರಾಟ ಸೇವೆ ಆರಂಭವಾಗಿರುವುದಾಗಿ ಏರ್ ಇಂಡಿಯಾ ಸಂಸ್ಥೆಯ ಖಾಯಂ ನೌಕರರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯವಾಗಿತ್ತು ಎಮದು ನೌಕರರು ಮಾಹಿತಿ ನೀಡಿದ್ದಾರೆ.

ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿಪೋಸ್ಟ್‌ಗಳನ್ನು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.