ADVERTISEMENT

ನಾಲ್ಕು ರಾಜ್ಯಗಳಲ್ಲಿ ಮಳೆ, ಪ್ರವಾಹ: ಸಂಕಷ್ಟದಲ್ಲಿ ಜನಜೀವನ

ಏಜೆನ್ಸೀಸ್
Published 28 ಜುಲೈ 2020, 6:38 IST
Last Updated 28 ಜುಲೈ 2020, 6:38 IST
ಮಳೆಯಿಂದಾಗಿ ಆಶ್ರಯ ಪಡೆಯುತ್ತಿರುವ ಜನ (ಎಎನ್‌ಐ ಟ್ವಿಟರ್‌ ಚಿತ್ರ)
ಮಳೆಯಿಂದಾಗಿ ಆಶ್ರಯ ಪಡೆಯುತ್ತಿರುವ ಜನ (ಎಎನ್‌ಐ ಟ್ವಿಟರ್‌ ಚಿತ್ರ)   

ಕೋಲ್ಕತ: ಸಿಲಿಗುರಿ ಪ್ರದೇಶದ ಕೆಲವು ಭಾಗಗಳಲ್ಲಿ ಕಳೆದ 24 ಗಂಟೆಯಲ್ಲಿ 75.60 ಮಿ.ಮೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ಭಾರಿ ಪ್ರಮಾಣದ ನೀರು ನುಗ್ಗುತ್ತಿದೆ ಎಂದು ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.

ಬಂಕುರಾ, ಹೌರಾ ಜಿಲ್ಲೆಗಳಲ್ಲಿ ಸೋಮವಾರಸುರಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ 11 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಬಂಕುರಾ ಮತ್ತು ಪುರ್ಬಾ ಬರ್ಧಾಮನ್‌ ಜಿಲ್ಲೆಗಳಲ್ಲಿ ತಲಾ ಐದು ಜನರು ಸೇರಿದಂತೆ ಹೌರಾ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ದಕ್ಷಿಣ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ADVERTISEMENT

ಪ್ರವಾಹ ಪೀಡಿತರ ಮೇಲೆ ಹರಿದ ವ್ಯಾನ್‌: ಇಬ್ಬರು ಸಾವು
ಬಿಹಾರ:
ದಾರ್‌ಭಾಂಗ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಿದ್ದು, ರಾಷ್ಟ್ರೀಯ ಹೆದ್ದಾರಿ ಬಳಿ ಆಶ್ರಯ ಪಡೆಯುತ್ತಿದ್ದ ಜನರ ಮೇಲೆ ಪಿಕಪ್‌ ವ್ಯಾನ್‌ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಬಿಹಾರದ 11 ಜಿಲ್ಲೆಗಳಲ್ಲಿ ಒಟ್ಟು 24.42 ಲಕ್ಷ ಮಂದಿ ತೊಂದರೆಗೀಡಾಗಿದ್ದಾರೆ. ದಾರ್‌ಭಾಂಗ ಜಿಲ್ಲೆಯಲ್ಲಿ (8.87 ಲಕ್ಷ) ಅತಿ ಹೆಚ್ಚು ಮಂದಿ ಪ್ರವಾಹದಿಂದ ಬಾಧಿತರಾಗಿದ್ದಾರೆ.

ಮುಂದುವರಿದ ಮಳೆ: ಜನಜೀವನ ಅಸ್ತವ್ಯಸ್ತ
ಉತ್ತರಾಖಂಡದಲ್ಲಿ ಮಂಗಳವಾರವೂ ಮಳೆ ಮುಂದುವರಿದಿದ್ದು, ಚಮೋಲಿ ಜಿಲ್ಲೆಯ ಪಡರ್‌ಗಾಂವ್‌ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದ ‍ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, 12 ವರ್ಷದ ಬಾಲಕಿ ಗಾಯಗೊಂಡಿದ್ದಾಳೆ.

ಪಿಥೋರಗಢದಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದ ಪರಿಣಾಮ ಭೂಕುಸಿತ ಉಂಟಾಗಿದ್ದು, ಮೂವರು ಮೃತಪಟ್ಟಿದ್ದರು.

ಮಹಾರಾಷ್ಟ್ರದಲ್ಲಿ ಮಳೆ: ನಗರದಮಾಟುಂಗಾ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಉತ್ತಮ ಮಳೆಯಾಗಿದ್ದು,ಬಹುತೇಕ ರಸ್ತೆಗಳಲ್ಲಿ ನೀರು ನಿಂತಿದ್ದವು.ವಾಹನ ಸವಾರರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.