ADVERTISEMENT

ಪುರಿ ದೇಗುಲ: ಫೋಕಸ್ ಲೈಟ್‌ ನಾಪತ್ತೆ

ಪಿಟಿಐ
Published 8 ಜೂನ್ 2024, 22:49 IST
Last Updated 8 ಜೂನ್ 2024, 22:49 IST
   

ಭುವನೇಶ್ವರ: ಶ್ರೀ ಜಗನ್ನಾಥ ದೇವಾಲಯದ ಸೌಂದರ್ಯೀಕರಣ ಯೋಜನೆಯ ಭಾಗವಾಗಿ
ಅಳವಡಿಸಲಾಗಿದ್ದ, ಫೋಕಸ್ ಲೈಟ್‌ಗಳನ್ನು ಚುನಾವಣಾ ಫಲಿತಾಂಶದ ಎಣಿಕೆಯ ಸಂಜೆ ಮತ್ತು ಚುನಾವಣೆಯಲ್ಲಿ ಬಿಜೆಡಿ ಸೋಲಿನ ನಂತರ ತೆಗೆದುಹಾಕಲಾಯಿತು.

ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒಡಿಶಾದ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ಅವರು ಪುರಿ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

‘ದೇವಾಲಯದ ಮೇಲಿನ ಫೋಕಸ್ ಲೈಟ್‌ಗಳನ್ನು ತೆಗೆದುಹಾಕಿರುವ ಕುರಿತು ಮುಖ್ಯ ಕಾರ್ಯದರ್ಶಿಯಿಂದ ಸೂಚನೆಯನ್ನು ಸ್ವೀಕರಿಸಲಾಗಿದೆ. ಘಟನೆಯ ಬಗೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ, ಜಿಲ್ಲಾಡಳಿತಕ್ಕೆ
ಮಾಹಿತಿ ನೀಡದೆ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಲೈಟ್‌ಗಳನ್ನು ತೆಗೆದಿದೆ’ ಎಂದು ಪುರಿ
ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಹೇಳಿದ್ದಾರೆ.

ADVERTISEMENT

ಕಳೆದ 2-3 ದಿನಗಳಿಂದ ಜಗನ್ನಾಥ ದೇವಾಲಯದ ಮೇಲೆ ಕೇಂದ್ರೀಕರಿಸಲು ಅಳವಡಿಸಲಾದ ಫೋಕಸ್
ಲೈಟ್‌ಗಳನ್ನು ತೆಗೆದಿರುವುದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.