ADVERTISEMENT

ರಾಜ್ಯಗಳಿಗೆ ಲಸಿಕೆ ಪೂರೈಸಲು ಗಮನ ಹರಿಸಿ: ನೂತನ ಆರೋಗ್ಯ ಸಚಿವರಿಗೆ ಚಿದಂಬರಂ ಸಲಹೆ

ಪಿಟಿಐ
Published 8 ಜುಲೈ 2021, 7:59 IST
Last Updated 8 ಜುಲೈ 2021, 7:59 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ಕೋವಿಡ್‌ ಲಸಿಕೆಯ ಕೊರತೆ ನೀಗಿಸಲು ಹಾಗೂ ಅಡೆತಡೆಗಳಿಲ್ಲದೆ ರಾಜ್ಯಗಳಿಗೆ ಲಸಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ನೂತನ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯಾ ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಲಸಿಕೆ ಕೊರತೆಯಿಂದಾಗಿ ತಮಿಳುನಾಡಿನ ಅನೇಕ ಕೇಂದ್ರಗಳಲ್ಲಿ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ನೂತನ ಆರೋಗ್ಯ ಸಚಿವರು ಲಸಿಕೆ ಪೂರೈಕೆಯಲ್ಲಾಗುತ್ತಿರುವ ವ್ಯತ್ಯಯವನ್ನು ಸರಿಪಡಿಸಿ, ಎಲ್ಲ ರಾಜ್ಯಗಳಿಗೂ ಅಗತ್ಯವಿರುವಷ್ಟು ಲಸಿಕೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು‘ ಎಂದು ಹೇಳಿದ್ದಾರೆ.

‘ಗಿನ್ನಿಸ್‌ ದಾಖಲೆಗೆ ಸೇರಲು ಯಾವುದೇ ಆಟಗಳಿಲ್ಲ. ದಯವಿಟ್ಟು ಎಲ್ಲ ರಾಜ್ಯಗಳಿಗೆ ಲಸಿಕೆಯನ್ನು ಪೂರೈಸುವತ್ತ ಗಮನಹರಿಸಿ‘ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.