ನವದೆಹಲಿ: ಕೋರ್ಟ್‌ಗಳಿಗೆ ಮೂಲಸೌಕರ್ಯ ಒದಗಿಸುವುದಕ್ಕಾಗಿ ರಚನೆಯಾಗಲಿರುವ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ದೆಹಲಿಯಲ್ಲಿ ನಡೆದ ಹೈಕೋರ್ಟ್‌ಗಳ ಮುಖ್ಯನ್ಯಾಯ ಮೂರ್ತಿಗಳು ಹಾಗೂ ಮುಖ್ಯಮಂತ್ರಿ ಗಳ ಸಮಾವೇಶದಲ್ಲಿ ಪ್ರಾಧಿಕಾರ ರಚನೆ ಸಂಬಂಧ ತೆಗೆದುಕೊಳ್ಳಲಾದ ನಿರ್ಣಯವನ್ನು ಕೆಲವು ಮುಖ್ಯಮಂತ್ರಿಗಳು ಶನಿವಾರ ವಿರೋಧಿಸಿದ್ದಾರೆ.
ಒಂದು ವೇಳೆ ಪ್ರಾಧಿಕಾರ ರಚಿಸುವಂತಿದ್ದರೆ ಅದು ರಾಷ್ಟ್ರ ಮಟ್ಟಕ್ಕೆ ಬದಲಾಗಿ ರಾಜ್ಯಮಟ್ಟದಲ್ಲಿ ರಚನೆ ಯಾಗಬೇಕು ಹಾಗೂ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿಅಥವಾ ರಾಜ್ಯ ಸರ್ಕಾರದ ಪ್ರತಿನಿಧಿಯೊಬ್ಬರು ಇರಬೇಕು ಎಂಬ ಸಲಹೆಯನ್ನು ಮುಂದಿಡಲಾಗಿದೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೆಲವು ಮುಖ್ಯಮಂತ್ರಿಗಳು ಈ ಕುರಿತು ವಾಗ್ವಾದ ನಡೆಸಿದರು ಎಂದು ಮೂಲಗಳು ತಿಳಿಸಿವೆ. ನಂತರ, ರಾಜ್ಯ ಮಟ್ಟದಲ್ಲಿ ಪ್ರಾಧಿಕಾರ ರಚನೆ ಕುರಿತಂತೆ ರಿಜಿಜು ಹಾಗೂ ಮುಖ್ಯಮಂತ್ರಿಗಳ ನಡುವೆ ಬಹುತೇಕ ಒಮ್ಮತ ಮೂಡಿತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.