ADVERTISEMENT

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್‌ ಕುಮಾರ್‌ ರೆಡ್ಡಿ ಬಿಜೆಪಿ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2023, 12:36 IST
Last Updated 7 ಏಪ್ರಿಲ್ 2023, 12:36 IST
ಬಿಜೆಪಿ ಸೇರ್ಪಡೆಗೊಂಡ ಕಿರಣ್‌ ಕುಮಾರ್‌ ರೆಡ್ಡಿ
ಬಿಜೆಪಿ ಸೇರ್ಪಡೆಗೊಂಡ ಕಿರಣ್‌ ಕುಮಾರ್‌ ರೆಡ್ಡಿ    

ನವದೆಹಲಿ: ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌. ಕಿರಣ್‌ ಕುಮಾರ್‌ ರೆಡ್ಡಿ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಶುಕ್ರವಾರ ಇಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ನಾಲ್ಕು ಬಾರಿ ಶಾಸಕರಾಗಿದ್ದ ಕಿರಣ್‌ ಕುಮಾರ್ ಅವರು ಕಳೆದ ತಿಂಗಳು ಕಾಂಗ್ರೆಸ್‌ ತೊರೆದಿದ್ದರು.

ಬಿಜೆಪಿಗೆ ಸೇರಿದ ಬಳಿಕ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಹರಿಹಾಯ್ದ ಅವರು, ‘ಕಾಂಗ್ರೆಸ್‌ ನಾಯಕತ್ವವು ದೇಶದಾದ್ಯಂತ ಪಕ್ಷದ ಸಂಘಟನೆಯನ್ನು ಹಾನಿಗೊಳಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಜನರ ತೀರ್ಪನ್ನು ಸ್ವೀಕರಿಸುವಲ್ಲಿ ಮತ್ತು ತಿದ್ದಿಕೊಳ್ಳುವಲ್ಲಿ ಕಾಂಗ್ರೆಸ್ ಹೈಕಮಾಂಡ್‌ ಅಸಮರ್ಥವಾಗಿದೆ. ಈ ಕಾರಣಕ್ಕಾಗಿಯೇ ನಾನು ಆ ಪಕ್ಷವನ್ನು ತೊರೆದಿದ್ದೇನೆ’ ಎಂದು ಕಿರಣ್‌ ಕುಮಾರ್ ಹೇಳಿದ್ದಾರೆ.

‘ನನ್ನ ರಾಜ ಬಹಳ ಬುದ್ಧಿವಂತ. ಆತ ಸ್ವಂತವಾಗಿ ಯೋಚಿಸುವುದಿಲ್ಲ ಮತ್ತು ಯಾರ ಸಲಹೆಯನ್ನೂ ಪಡೆಯುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕರನ್ನು ಉದ್ದೇಶಿಸಿ ಟೀಕಿಸಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಿರುವ ಬದ್ಧತೆಯನ್ನು ಕಿರಣ್‌ ಕುಮಾರ್‌ ಅವರು ಪ್ರಶಂಸಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.