ADVERTISEMENT

ಇಎಸ್‌ಐಯಲ್ಲಿ ₹150 ಕೋಟಿ ಖರೀದಿ ಅಕ್ರಮ: ಆಂಧ್ರದ ಮಾಜಿ ಸಚಿವ ಸೇರಿ ಐವರ ಬಂಧನ

ಪಿಟಿಐ
Published 12 ಜೂನ್ 2020, 9:11 IST
Last Updated 12 ಜೂನ್ 2020, 9:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮರಾವತಿ: ಇಎಸ್‌ಐ ವೈದ್ಯಕೀಯ ಪರಿಕರಗಳ ಖರೀದಿ ಕುರಿತ ₹ 150 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಟಿಡಿಪಿ ಮುಖಂಡ ಕೆ.ಅತ್ಚನನಾಯ್ಡು ಮತ್ತು ಇತರೆ ಐವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಮಾಜಿ ಸಚಿವರನ್ನು ಶ್ರೀಕಾಕುಳಂನ ಅವರ ನಿವಾಸದಲ್ಲಿ ಬಂಧಿಸಲಾಯಿತು. ಇಎಸ್ಐನ ಮಾಜಿ ನಿರ್ದೇಶಕರಾದ ಸಿ.ರವಿ ಕುಮಾರ್, ಜಿ.ವಿಜಯಕುಮಾರ್‌, ರಾಜಮಹೇಂದ್ರವರಂ ಅವರನ್ನು ತಿರುಪತಿಯಲ್ಲಿ ಬಂಧಿಸಲಾಯಿತು ಎಂದು ಎಸಿಬಿ ಜಂಟಿ ನಿರ್ದೇಶಕ ರವಿಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಎಸ್‌ಐ ಜಂಟಿ ನಿರ್ದೇಶಕ ಜನಾರ್ದನ್, ಸೂಪರಿಂಟೆಂಡೆಂಟ್‌ ಚಕ್ರವರ್ತಿ, ಹಿರಿಯ ಸಹಾಯಕನನ್ನು ವಿಜಯವಾಡದಲ್ಲಿ ಬಂಧಿಸಲಾಗಿದೆ. ಅತ್ಚನನಾಯ್ಡು ಅವರು ಹಿಂದಿನ ಟಿಡಿಪಿ ನೇತೃತ್ವದ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಅವಧಿಯಲ್ಲಿ ಖರೀದಿ ಅಕ್ರಮ ನಡೆದಿತ್ತು.

ADVERTISEMENT

ಇಎಸ್‌ಐನಲ್ಲಿ 2014 ರಿಂದ 2019ರ ಅವಧಿಯಲ್ಲಿ ನಡೆದಿದ್ದ ಖರೀದಿ ವ್ಯವಹಾರಕ್ಕೆ ಸಂಬಂಧಿಸಿ ಎಸಿಬಿ ತನಿಖೆ ನಡೆಸಿತು. ಆಗ
₹ 150 ಕೋಟಿಯ ಖರೀದಿ ಅಕ್ರಮ ಬೆಳಕಿಗೆ ಬಂದಿದ್ದು, ಮಾಜಿ ಸಚಿವರು ಹಾಗೂ ಇತರರ ಪಾತ್ರ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಂಧಿಸಲಾಯಿತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.