ADVERTISEMENT

ಮನಮೋಹನ್ ಸಿಂಗ್ ನಿವೃತ್ತಿ: ರಾಜ್ಯಸಭೆಯಲ್ಲಿ 33 ವರ್ಷಗಳ ಅವಧಿ ಇಂದಿಗೆ ಕೊನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಏಪ್ರಿಲ್ 2024, 16:23 IST
Last Updated 2 ಏಪ್ರಿಲ್ 2024, 16:23 IST
<div class="paragraphs"><p>ಡಾ. ಮನಮೋಹನ್ ಸಿಂಗ್</p></div>

ಡಾ. ಮನಮೋಹನ್ ಸಿಂಗ್

   

ನವದೆಹಲಿ: 33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರ ಅವಧಿ ಇಂದಿಗೆ (ಮಂಗಳವಾರ) ಕೊನೆಗೊಂಡಿದೆ.

ದೇಶದ ಆರ್ಥಿಕತೆಯ ಸುಧಾರಣೆಗೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದ ಮನಮೋಹನ್‌, 1991ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ನರಸಿಂಹರಾವ್‌ ಅವರ ಸರ್ಕಾರದಲ್ಲಿ (1991 ರಿಂದ 1996) ಹಣಕಾಸು ಸಚಿವರಾಗಿದ್ದ ಅವರು 2004 ರಿಂದ 2014ರ ವರೆಗೆ ಪ್ರಧಾನಿಯಾಗಿದ್ದರು.

ADVERTISEMENT

91 ವರ್ಷದ ಸಿಂಗ್‌ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಏಪ‍್ರಿಲ್‌ 3ಕ್ಕೆ ಕೊನೆಗೊಳ್ಳಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.