ADVERTISEMENT

ಭೂ ಅಕ್ರಮ ಆರೋಪದ ಬಳಿಕ ಟಿಆರ್‌ಎಸ್‌ ತೊರೆದಿದ್ದ ತೆಲಂಗಾಣದ ಮಾಜಿ ಸಚಿವ ಬಿಜೆಪಿಗೆ

ಪಿಟಿಐ
Published 14 ಜೂನ್ 2021, 8:42 IST
Last Updated 14 ಜೂನ್ 2021, 8:42 IST
ನವದೆಹಲಿಯಲ್ಲಿ ಸೋಮವಾರ ಬಿಜೆಪಿ ಸೇರಿದ ಈಟಲ ರಾಜೇಂದರ್‌ ಅವರನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸ್ವಾಗತಿಸಿದರು  ಪಿಟಿಐ ಚಿತ್
ನವದೆಹಲಿಯಲ್ಲಿ ಸೋಮವಾರ ಬಿಜೆಪಿ ಸೇರಿದ ಈಟಲ ರಾಜೇಂದರ್‌ ಅವರನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸ್ವಾಗತಿಸಿದರು  ಪಿಟಿಐ ಚಿತ್   

ನವದೆಹಲಿ: ತೆಲಂಗಾಣದ ಮಾಜಿ ಸಚಿವ ಈಟಲ ರಾಜೇಂದರ್‌ ಅವರು ಸೋಮವಾರ ಬಿಜೆಪಿ ಸೇರಿದ್ದಾರೆ.

ರಾಜೇಂದ್ರ ಅವರು ಕೆಲ ದಿನಗಳ ಹಿಂದೆ ಹುಜುರಾಬಾದ್‌ ಶಾಸಕ ಸ್ಥಾನಕ್ಕೆ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.

ಟಿಆರ್‌ಎಸ್‌ನಲ್ಲಿ ಹಿರಿಯ ನಾಯಕರಾಗಿದ್ದ ರಾಜೇಂದರ್‌ ಅವರು, ಕೆ. ಚಂದ್ರಶೇಖರ್‌ ಅವರ ಸರ್ಕಾರದಲ್ಲಿ ಸಚಿವರಾಗಿ ಹಣಕಾಸು, ಆರೋಗ್ಯ ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿದ್ದರಿಂದ ಸಂಪುಟದಿಂದ ಅವರನ್ನು ಕೈಬಿಡಲಾಗಿತ್ತು.

ADVERTISEMENT

ಸೋಮವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಸಮ್ಮುಖದಲ್ಲಿ ರಾಜೇಂದರ್‌ ಬಿಜೆಪಿಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.