ADVERTISEMENT

ಫಾರ್ಮ್‌ಹೌಸ್‌ಗೆ ಸ್ಥಳಾಂತರಗೊಂಡ ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌

ಪಿಟಿಐ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
ಜಗದೀಪ್‌ ಧನಕರ್‌
ಜಗದೀಪ್‌ ಧನಕರ್‌   

ನವದೆಹಲಿ: ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ತಮ್ಮ ಅಧಿಕೃತ ನಿವಾಸದಿಂದ ದಕ್ಷಿಣ ದೆಹಲಿಯ ಛತರಪುರ್ ಪ್ರದೇಶದಲ್ಲಿರುವ ಐಎನ್‌ಎಲ್‌ಡಿ ಮುಖಂಡ ಅಭಯ್‌ ಚೌಟಾಲ ಅವರ ಫಾರ್ಮ್‌ಹೌಸ್‌ಗೆ ಸ್ಥಳಾಂತರಗೊಂಡಿದ್ದಾರೆ. 

ಅಧಿಕೃತ ನಿವಾಸ ಮಂಜೂರು ಆಗುವವರೆಗೆ ಧನಕರ್‌ ಅವರು ಈ ಫಾರ್ಮ್‌ಹೌಸ್‌ನಲ್ಲಿ ತಾತ್ಕಾಲಿಕವಾಗಿ ನೆಲಸಲಿದ್ದಾರೆ. 

ಅನಾರೋಗ್ಯದ ಕಾರಣ ನೀಡಿ ಜುಲೈ 21ರಂದು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.