ADVERTISEMENT

ಸಿಯುಇಟಿ ನಾಲ್ಕನೇ ಹಂತದ ಪರೀಕ್ಷೆ ನಾಳೆಯಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 14:27 IST
Last Updated 16 ಆಗಸ್ಟ್ 2022, 14:27 IST

ನವದೆಹಲಿ: ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ‘ಸಿಯುಇಟಿ–2022’ ಪರೀಕ್ಷೆಯ ನಾಲ್ಕನೇ ಹಂತ ಬುಧವಾರದಿಂದ ಆರಂಭವಾಗಲಿದ್ದು, ಸುಮಾರು 3.6 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಇನ್ನು ಪರೀಕ್ಷಾ ಕೇಂದ್ರಗಳನ್ನು ಬದಲಿಸಿಕೊಂಡಿರುವ 11 ಸಾವಿರ ಅಭ್ಯರ್ಥಿಗಳಿಗೆ ಇದೇ 30ರಂದು ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.

ನಾಲ್ಕು ಹಂತಗಳಲ್ಲಿ ಈ ಪರೀಕ್ಷೆ ನಡೆಸಲು ಎನ್‌ಟಿಎ ಮೊದಲು ವೇಳಾಪಟ್ಟಿ ಪ್ರಕಟಿಸಿತ್ತು. ಆದರೆ ಪರೀಕ್ಷೆ ಆರಂಭಿಕ ಹಂತಗಳಲ್ಲಿ ತಾಂತ್ರಿಕ ಲೋಪಗಳು ಎದುರಾದ ಕಾರಣ, ಎನ್‌ಟಿಎ ಆರು ಹಂತಗಳಲ್ಲಿ ಪರೀಕ್ಷೆ ನಡೆಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.