ADVERTISEMENT

ಕೇರಳದಲ್ಲಿ ಎಲ್ಲರಿಗೂ ಉಚಿತ ಕೋವಿಡ್‌–19 ಲಸಿಕೆ: ಸಿಎಂ ಪಿಣರಾಯಿ ವಿಜಯನ್‌ ಘೋಷಣೆ

ಪಿಟಿಐ
Published 13 ಡಿಸೆಂಬರ್ 2020, 7:04 IST
Last Updated 13 ಡಿಸೆಂಬರ್ 2020, 7:04 IST
   

ತಿರುವನಂತಪುರ: ‘ಕೇರಳದಲ್ಲಿರುವ ಎಲ್ಲ ಜನರಿಗೂ ಕೋವಿಡ್‌–19 ಲಸಿಕೆ ಉಚಿತವಾಗಿ ಲಭ್ಯವಾಗಲಿದೆ. ಲಸಿಕೆಗಾಗಿ ಯಾರಿಂದಲೂ ಹಣ ಪಡೆಯುವುದಿಲ್ಲ. ಇದು ಸರ್ಕಾರದ ನಿಲುವು’ ಎಂದು ಕಣ್ಣೂರಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶನಿವಾರ ಹೇಳಿದರು.

ಈಗಾಗಲೇ ಮಧ್ಯಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳು ತಮ್ಮ ಜನರಿಗೆ ಉಚಿತವಾಗಿ ಕೋವಿಡ್‌–19 ಲಸಿಕೆಯ ಘೋಷಣೆಯನ್ನು ಮಾಡಿವೆ. ‘ಕೇಂದ್ರ ಸರ್ಕಾರವು ರಾಜ್ಯಕ್ಕೆ ಎಷ್ಟು ಲಸಿಕೆಗಳನ್ನು ಮೀಸಲಿರಿಸಿದೆ ಎನ್ನುವುದು ಇನ್ನೂ ತಿಳಿದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದೇ ಸಮಾಧಾನದ ವಿಷಯ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯು ನಡೆಯುತ್ತಿದ್ದು, ಇದರಿಂದಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಲಿದೆಯೇ ಎನ್ನುವುದು ಪ್ರಶ್ನೆಯಾಗಿದೆ. ಪ್ರಕರಣಗಳ ಸಂಖ್ಯೆ ಏರಿಕೆಯಾಗದಿದ್ದಲ್ಲಿ, ಗುಣಮುಖ ಪ್ರಮಾಣ ಮತ್ತಷ್ಟು ಹೆಚ್ಚಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT