ಸಾಂದರ್ಭಿಕ ಚಿತ್ರ
ದೇಶದ ಉದ್ದಗಲಕ್ಕೂ 67,000 ಕಿ.ಮೀ.ಗಳಿಗೂ ಹೆಚ್ಚು ವ್ಯಾಪಿಸಿರುವ ಭಾರತೀಯ ರೈಲ್ವೆಯಲ್ಲಿ, ಸುಮಾರು 13,000ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳು ಕಾರ್ಯನಿರ್ವಹಿಸುತ್ತವೆ.
ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಕರೆದೊಯ್ಯುವುದರ ಜೊತೆಗೆ, ರೈಲುಗಳು ಪ್ರಯಾಣದ ಸಮಯದಲ್ಲಿ ಊಟವನ್ನು ಸಹ ಒದಗಿಸುತ್ತವೆ. ರೈಲು ಟಿಕೆಟ್‌ಗಳನ್ನು ಬುಕ್ ಮಾಡುವಾಗ ಹಣ ಪಾವತಿಸಿದರೆ ಪ್ರಯಾಣಿಕರು ರೈಲುಗಳಲ್ಲಿ ಬಿಸಿ ಊಟವನ್ನು ಸವಿಯಬಹುದು. ಆದರೆ ಈ ರೈಲು ತನ್ನ ಪ್ರಯಾಣಿಕರಿಗೆ ಸಂಪೂರ್ಣ ಉಚಿತವಾಗಿ ಊಟವನ್ನು ಪೂರೈಸುತ್ತಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಹಾರಾಷ್ಟ್ರದ ನಾಂದೇಡ್ ಮತ್ತು ಪಂಜಾಬ್‌ನ ಅಮೃತಸರ ನಡುವೆ ಸಂಚರಿಸುವ 'ಸಚ್‌ಖಂಡ್ ಎಕ್ಸ್‌ಪ್ರೆಸ್' (12715) ರೈಲು ಸುಮಾರು 29 ವರ್ಷಗಳಿಂದ ತನ್ನ ಪ್ರಯಾಣಿಕರಿಗೆ ಉಚಿತವಾಗಿ ಊಟವನ್ನು ಒದಗಿಸುತ್ತಿದೆ.
ಈ ರೈಲು ಅಮೃತಸರದ ಹರ್ಮಂದರ್ ಸಾಹಿಬ್ ಗುರುದ್ವಾರದಿಂದ ನಾಂದೇಡ್‌ನ ಹುಜೂರ್ ಸಾಹಿಬ್ ಗುರುದ್ವಾರಕ್ಕೆ ಸಂಚರಿಸುತ್ತದೆ. ತನ್ನ 2,000 ಕಿ.ಮೀ ಪ್ರಯಾಣದುದ್ದಕ್ಕೂ ಪ್ರಯಾಣಿಕರಿಗೆ ಉಚಿತ ಆಹಾರವನ್ನು ಒದಗಿಸುವ ಏಕೈಕ ರೈಲು ಇದಾಗಿದೆ.
33 ಗಂಟೆಗಳ ಪ್ರಯಾಣದ ಅವಧಿಯಲ್ಲಿ ಈ ರೈಲು 39 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಇದರಲ್ಲಿ 'ಲಂಗರ್' (ಅನ್ನ ದಾಸೋಹ) ಸೌಲಭ್ಯ ಇರುವ ಆರು ಪ್ರಮುಖ ನಿಲ್ದಾಣಗಳು (ನವದೆಹಲಿ, ಭೋಪಾಲ್, ಪರ್ಭಾನಿ, ಜಲ್ನಾ, ಔರಂಗಾಬಾದ್ ಮತ್ತು ಮರಾಠವಾಡ) ಸೇರಿವೆ.
'ಲಂಗರ್' ಮೆನುವು ಸಾಮಾನ್ಯವಾಗಿ 'ಕಧಿ-ಚಾವಲ್', 'ಚೋಲೆ', 'ದಾಲ್', 'ಖಿಚಡಿ', 'ಆಲೂ-ಕ್ಯಾಬೇಜ್' ಪಲ್ಯ ಮತ್ತು ಇತರ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ.
ಊಟದ ವೆಚ್ಚವನ್ನು ಗುರುದ್ವಾರಗಳು ಆಹಾರ ಮತ್ತು ಹಣದ ರೂಪದಲ್ಲಿ ಪಡೆಯುವ ದೇಣಿಗೆಗಳಿಂದ ಭರಿಸಲಾಗುತ್ತದೆ. ರೈಲಿನಲ್ಲಿ ಒದಗಿಸಲಾಗುವ ಊಟ ಉಚಿತವಾಗಿದ್ದರೂ, ಪ್ರಯಾಣಿಕರು ಆಹಾರವನ್ನು ಆನಂದಿಸಲು ತಮ್ಮದೇ ಆದ ತಟ್ಟೆ ಅಥವಾ ಪಾತ್ರೆಗಳನ್ನು ಕೊಂಡೊಯ್ಯುವಂತೆ ವಿನಂತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.