ADVERTISEMENT

ಗುರಿ ತಲುಪದ ಉಚಿತ ಪಡಿತರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 19:57 IST
Last Updated 1 ಜುಲೈ 2020, 19:57 IST
ಜಭಲ್‌ಪುರದ ಎಪಿಎಂಸಿಯಲ್ಲಿ ಗೋದಿ ಶುಚಿಮಾಡಿದ ಮಹಿಳೆ –ಪಿಟಿಐ ಚಿತ್ರ
ಜಭಲ್‌ಪುರದ ಎಪಿಎಂಸಿಯಲ್ಲಿ ಗೋದಿ ಶುಚಿಮಾಡಿದ ಮಹಿಳೆ –ಪಿಟಿಐ ಚಿತ್ರ   
""

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್ ಅನ್ನ ಯೋಜನೆ–1ರಲ್ಲಿ ಮೇ ಮತ್ತು ಜೂನ್‌ ತಿಂಗಳಲ್ಲಿ ಪಡಿತರ ಚೀಟಿ ಇಲ್ಲದ 8 ಕೋಟಿ ವಲಸೆ ಕಾರ್ಮಿಕರಿಗೆ ಉಚಿತವಾಗಿ ಪಡಿತರ ನೀಡಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿತ್ತು. ಆದರೆ ಈ ಗುರಿಯಲ್ಲಿ ಅರ್ಧದಷ್ಟನ್ನು ಮುಟ್ಟಲೂ ಸರ್ಕಾರ ವಿಫಲವಾಗಿದೆ. ವಲಸೆ ಕಾರ್ಮಿಕರಿಗೆ ವಿತರಿಸಲು ಎಂದು ರಾಜ್ಯಗಳಿಗೆ ನೀಡಲಾಗಿದ್ದ ಪಡಿತರವನ್ನು ಯಾವ ರಾಜ್ಯವೂ ಪೂರ್ಣ ಪ್ರಮಾಣದಲ್ಲಿ ವಿತರಣೆ ಮಾಡಿಲ್ಲ. ಕೆಲವು ರಾಜ್ಯಗಳಲ್ಲಿ ಬಳಕೆ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆ ಇದೆ ಎಂದು ಕೇಂದ್ರ ಪಡಿತರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಹೇಳಿದೆ.

* ಕೋಟಿ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆ ಗುರಿ

* 2.14 ಕೋಟಿ ಉಚಿತ ಪಡಿತರ ಪಡೆದ ವಲಸೆ ಕಾರ್ಮಿಕರ ಸಂಖ್ಯೆ

ADVERTISEMENT

* 8 ಲಕ್ಷ ಟನ್‌ನಷ್ಟು ಪಡಿತರ ವಿತರಣೆ ಗುರಿ

* 6.4 ಲಕ್ಷ ಟನ್‌ನಷ್ಟು ಪಡಿತರವನ್ನು ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ

* 1.07 ಲಕ್ಷ ಟನ್‌ನಷ್ಟು ಪಡಿತರ ಮಾತ್ರ ವಿತರಣೆ ಮಾಡಲಾಗಿದೆ

* ಎರಡೂ ತಿಂಗಳಲ್ಲಿ ರಾಜಸ್ಥಾನದಲ್ಲಿ ಹೆಚ್ಚು ವಲಸೆ ಕಾರ್ಮಿಕರಿಗೆ (84.94 ಲಕ್ಷ) ಪಡಿತರ ವಿತರಣೆ ಮಾಡಲಾಗಿದೆ

* ಗೋವಾ ಮತ್ತು ತೆಲಂಗಾಣದಲ್ಲಿ ಪಡಿತರ ವಿತರಣೆ ಪ್ರಮಾಣ ಶೇ 0ಯಷ್ಟಿದೆ

* ಕರ್ನಾಟಕದಲ್ಲಿ 20.47 ಲಕ್ಷ ವಲಸೆ ಕಾರ್ಮಿಕರಿಗೆ ಪಡಿತರ ವಿತರಣೆ ಮಾಡಲಾಗಿದೆ

* ವಲಸೆ ಕಾರ್ಮಿಕರು ರಾಜ್ಯದಿಂದ ಹೊರಗೆ ಹೋಗಿರುವ ಕಾರಣ ಪಡಿತರ ವಿತರಣೆ ಸಾಧ್ಯವಾಗಿಲ್ಲ ಎಂದು 6 ರಾಜ್ಯಗಳು ಈಗಾಗಲೇ ವರದಿ ಸಲ್ಲಿಸಿವೆ

* ಉಚಿತ ಪಡಿತರ ಯೋಜನೆಯ ಫಲಾನುಭವಿಗಳ ಸಂಪೂರ್ಣ ವಿವರವನ್ನು ಜುಲೈ 15ರ ಒಳಗೆ ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ

* ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಣೆ ಆಗಿರುವುದಕ್ಕೆ ಏನು ಕಾರಣ ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ

ಅನುಷ್ಠಾನಕ್ಕೆ ಬೇಕು 3.2 ಕೋಟಿ ಟನ್ ಪಡಿತರ
ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್ ಅನ್ನ ಯೋಜನೆ–1 ಮತ್ತು 2ನೇ ಹಂತದ ಯೋಜನೆಯ ಅನುಷ್ಠಾನಕ್ಕೆ 3.2 ಕೋಟಿ ಟನ್‌ನಷ್ಟು ಪಡಿತರ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ

₹ 1.49 ಲಕ್ಷ ಕೋಟಿ:ಯೋಜನೆಯ ಅನುಷ್ಠಾನಕ್ಕೆ ಬೇಕಿರುವ ಹಣ

₹ 46,061 ಕೋಟಿ:ಕೇಂದ್ರ ಸರ್ಕಾರ ನೀಡಲಿರುವ ಹಣ

ಆಧಾರ: ಪಿಟಿಐ, ಪಿಐಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.