ADVERTISEMENT

ರಾಜಸ್ಥಾನ | ಜಂತರ್‌ ಮಂತರ್‌–ಹವಾ ಮಹಲ್‌ವರೆಗೆ ಮೋದಿ–ಮ್ಯಾಕ್ರಾನ್‌ ರೋಡ್ ಶೋ ಇಂದು

ಪಿಟಿಐ
Published 25 ಜನವರಿ 2024, 11:31 IST
Last Updated 25 ಜನವರಿ 2024, 11:31 IST
<div class="paragraphs"><p>ರಾಜಸ್ಥಾನದ ಜೈಪುರಕ್ಕೆ ಗುರುವಾರ ಬಂದಿಳಿದ&nbsp;ಇಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು&nbsp;ಕಾಲ್ರಾಜ್‌ ಮಿಶ್ರಾ ಹಾಗೂ ಭಜನ್ ಲಾಲ್ ಶರ್ಮಾ ಸ್ವಾಗತಿಸಿದರು. ಎಸ್.ಜೈಶಂಕರ್ ಇದ್ದಾರೆ.</p></div>

ರಾಜಸ್ಥಾನದ ಜೈಪುರಕ್ಕೆ ಗುರುವಾರ ಬಂದಿಳಿದ ಇಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ಕಾಲ್ರಾಜ್‌ ಮಿಶ್ರಾ ಹಾಗೂ ಭಜನ್ ಲಾಲ್ ಶರ್ಮಾ ಸ್ವಾಗತಿಸಿದರು. ಎಸ್.ಜೈಶಂಕರ್ ಇದ್ದಾರೆ.

   

ಪಿಟಿಐ ಚಿತ್ರ

ಜೈಪುರ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ಇಂದು (ಗುರುವಾರ) ಜೈಪುರಕ್ಕೆ ಬಂದಿಳಿದಿದ್ದಾರೆ.

ADVERTISEMENT

ಅವರನ್ನು ರಾಜಸ್ಥಾನದ ರಾಜ್ಯಪಾಲ ಕಾಲ್ರಾಜ್‌ ಮಿಶ್ರಾ ಹಾಗೂ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಬರಮಾಡಿಕೊಂಡರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬುಲಂದ್‌ಶಹರ್‌ ಪ್ರವಾಸದಲ್ಲಿದ್ದು, ಸಂಜೆ ಹೊತ್ತಿಗೆ ಜೈಪುರ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಭಯ ನಾಯಕರು ಅಂಬೇರ್‌ ಕೋಟೆ, ಜಂತರ್‌ ಮಂತರ್‌, ಹವಾ ಮಹಲ್‌ಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಜಂತರ್‌ ಮಂತರ್‌ನಿಂದ ಹವಾ ಮಹಲ್‌ವರೆಗೆ ರೋಡ್ ಶೋ ನಡೆಸಲಿದ್ದಾರೆ. ನಂತರ ರಾಮ್‌ಬಾಗ್ ಅರಮನೆ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ ಎಂದು ಪಿಟಿಐ ವರದಿ ಮಾಡಿದೆ. 

ಭಾರತ ಪ್ರವಾಸ ಕೈಗೊಂಡಿರುವ ಫ್ರಾನ್ಸ್‌ ನಾಯಕರು ಜೈಪುರದಲ್ಲಿರುವ ಕೆಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಶಾಪಿಂಗ್ ನಡೆಸಲಿದ್ದಾರೆ. ಸಾಹು ಚಹಾ ಅಂಗಡಿಯಲ್ಲಿ ಮಸಾಲಾ ಚಹಾ ಸೇವಿಸಲಿದ್ದಾರೆ. ಇದಕ್ಕೆ ಯುಪಿಐ ಬಳಸಿ ಹಣ ಪಾವತಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂಬೇರ್ ಕೋಟೆಯಲ್ಲಿ ಆನೆಗಳ ಸ್ವಾಗತ

ಫ್ರಾನ್‌ ಅಧ್ಯಕ್ಷ ಮ್ಯಾಕ್ರಾನ್ ಅವರಿಗೆ ಅಂಬೇರ್ ಕೋಟೆಯಲ್ಲಿ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಮಾರ್ಗದ ಇಕ್ಕೆಲಗಳಲ್ಲಿ ನಿಲ್ಲಿಸಿದ ಆನೆಗಳು ಸೊಂಡಿಲು ಎತ್ತಿ ಸ್ವಾಗತಿಸಿದವು. ಕೋಟೆಯ ಆವರಣದ ಹೊರಭಾಗದಲ್ಲಿ ಕಲಾಕೃತಿಗಳ ಪ್ರದರ್ಶನಕ್ಕಾಗಿ ತಾತ್ಕಾಲಿಕ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಇದ್ದರು. 

ಜೈಪುರದ ಹಲವು ಪ್ರದೇಶಗಳಲ್ಲಿ ಮೋದಿ ಮತ್ತು ಮ್ಯಾಕ್ರಾನ್ ಅವರ ಬೃಹತ್ ಕಟ್‌ಔಟ್‌ಗಳನ್ನು ನಿಲ್ಲಿಸಲಾಗಿದೆ. ನಗರದಲ್ಲಿ ಭಿಗಿ ಭದ್ರತೆ ಒದಗಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.