ADVERTISEMENT

ಭಿಕ್ಷಾಟನೆ ಮುಕ್ತ ನಗರ ನಿರ್ಮಾಣಕ್ಕೆ ಇಂದೋರ್‌ ಪಣ: ಭಿಕ್ಷೆ ನೀಡಿದವರ ವಿರುದ್ಧ FIR

ಪಿಟಿಐ
Published 16 ಡಿಸೆಂಬರ್ 2024, 11:27 IST
Last Updated 16 ಡಿಸೆಂಬರ್ 2024, 11:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಂದೋರ್(ಮಧ್ಯಪ್ರದೇಶ): ಭಿಕ್ಷಾಟನೆ ಮುಕ್ತ ನಗರ’ ನಿರ್ಮಾಣಕ್ಕೆ ಪಣ ತೊಟ್ಟಿರುವ ಇಂದೋರ್‌ ಮಹಾ‌ನಗರ ಪಾಲಿಕೆಯು, ಭಿಕ್ಷೆ ನೀಡುವವರ ವಿರುದ್ಧವೇ ಎಫ್‌ಐಆರ್‌ ದಾಖಲಿಸಲು ನಿರ್ಧರಿಸಿದೆ.

‘ಭಿಕ್ಷುಕರಿಗೆ ಭಿಕ್ಷೆ ನೀಡಿ, ಭಿಕ್ಷಾಟನೆಯನ್ನು ಪ್ರೋತ್ಸಾಹಿಸದಂತೆ ಇಂದೋರ್‌ ನಗರದಾದ್ಯಂತ ಈ ತಿಂಗಳ ಅಂತ್ಯದವರೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ವ್ಯಕ್ತಿಯು ಜನವರಿ 1ರ ಬಳಿಕವೂ ಭಿಕ್ಷೆ ನೀಡುವುದು ಕಂಡುಬಂದಲ್ಲಿ, ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗುವುದು’ ಎಂದು ಎಂದು ಜಿಲ್ಲಾಧಿಕಾರಿ ಆಶಿಶ್‌ ಸಿಂಗ್‌ ಅವರು ತಿಳಿಸಿದ್ದಾರೆ.

ADVERTISEMENT

’ಇಂದೋರ್‌ ನಗರದ ವ್ಯಾಪ್ತಿಯಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಈ ಬಗ್ಗೆ ಈಗಾಗಲೇ  ಆದೇಶವನ್ನು ಹೊರಡಿಸಲಾಗಿದೆ. ಅಲ್ಲದೇ, ಭಿಕ್ಷೆ ನೀಡುವ ಮೂಲಕ ಪಾಪ ಕೃತ್ಯದಲ್ಲಿ ತಾವೂ ಭಾಗಿಯಾಗದಂತೆ, ಇಂದೋರ್‌ನ ಎಲ್ಲ ನಿವಾಸಿಗಳಲ್ಲಿ ಮನವಿ ಮಾಡುತ್ತೇನೆ' ಎಂದು ಅವರು  ಹೇಳಿದ್ದಾರೆ.

‘ಅಮಾಯಕರನ್ನು ಬಳಸಿಕೊಂಡು ಭಿಕ್ಷಾಟನೆ ದಂಧೆ ನಡೆಸುತ್ತಿದ್ದ ಹಲವು ಪ್ರಕರಣಗಳನ್ನು ಜಿಲ್ಲಾಡಳಿತವು ಇತ್ತೀಚಿನ ದಿನಗಳಲ್ಲಿ ಪತ್ತೆಹಚ್ಚಿದೆ. ಭಿಕ್ಷಾಟನೆಯಲ್ಲಿ ತೊಡಗಿದ್ದ ಹಲವು ಮಂದಿಗೆ ಸರ್ಕಾರದ ವತಿಯಿಂದ ಪುನರ್ವಸತಿಯನ್ನೂ ಕಲ್ಪಿಸಲಾಗಿದೆ‘  ಎಂದು ಆಶಿಶ್‌ ಅವರು ಮಾಹಿತಿ ನೀಡಿದ್ದಾರೆ.

10 ನಗರಗಳಲ್ಲಿ ಪ್ರಾಯೋಗಿಕ ಜಾರಿ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು, ಭಿಕ್ಷಾಟನೆ ನಿರ್ಮೂಲನೆಗಾಗಿ ‘ಭಿಕ್ಷಾ ವೃತ್ತಿ ಮುಕ್ತ ಭಾರತ’ ಯೋಜನೆಯನ್ನು 10 ನಗರಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದೆ. ಈ ನಗರಗಳ ಪೈಕಿ ಇಂದೋರ್‌ ಕೂಡ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.