ADVERTISEMENT

ಮೀಸಲಾತಿಯ ಫಲ ತಳ ವರ್ಗಗಳಿಗೆ ತಲುಪುತ್ತಿಲ್ಲ: ಎನ್‌ಎಚ್‌ಆರ್‌ಸಿ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 16:15 IST
Last Updated 12 ಅಕ್ಟೋಬರ್ 2022, 16:15 IST
 ಬುಧವಾರ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) 29ನೇ ಸಂಸ್ಥಾಪಕ ದಿನಾಚರಣೆಯಲ್ಲಿ ಮುಖ್ಯಸ್ಥ ಅರುಣ್‌ ಕುಮಾರ್‌ ಮಿಶ್ರ ಅವರು ಮಾತನಾಡಿದರು   –ಪಿಟಿಐ ಚಿತ್ರ
 ಬುಧವಾರ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) 29ನೇ ಸಂಸ್ಥಾಪಕ ದಿನಾಚರಣೆಯಲ್ಲಿ ಮುಖ್ಯಸ್ಥ ಅರುಣ್‌ ಕುಮಾರ್‌ ಮಿಶ್ರ ಅವರು ಮಾತನಾಡಿದರು   –ಪಿಟಿಐ ಚಿತ್ರ   

ನವದೆಹಲಿ: ಸಮಾಜದ ತಳಮಟ್ಟಕ್ಕೆ ಮೀಸಲಾತಿಯ ಫಲ ತಲುಪುತ್ತಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷ ನ್ಯಾಯಮೂರ್ತಿ ಅರುಣ್‌ ಕುಮಾರ್‌ ಮಿಶ್ರ ಬುಧವಾರ ಅಭಿಪ್ರಾಯಪಟ್ಟರು.

ಇಲ್ಲಿಯ ಡಾ. ಅಂಬೇಡ್ಕರ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಎನ್‌ಎಚ್‌ಆರ್‌ಸಿಯ 29ನೇ ಸಂಸ್ಥಾಪಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ತಳವರ್ಗಗಳನ್ನು ಸುಧಾರಣೆಗಾಗಿ ಸರ್ಕಾರವು ಹಲವು ಸಾಮಾಜಿಕ– ಆರ್ಥಿಕ ಮತ್ತು ರಾಜಕೀಯ ಕ್ರಮಗಳನ್ನು ಕೈಗೊಂಡಿದೆ. ಈ ಯೋಜನೆಗಳ ಹೊರತಾಗಿಯೂ ಸಮಗ್ರ ಅಭಿವೃದ್ಧಿಗಾಗಿ ಮೀಸಲಾತಿ ಅಗತ್ಯವಿದೆ’ ಎಂದರು. ಜೊತೆಗೆ ಕಾರಾಗೃಹಗಳನ್ನು ತಕ್ಷಣವೇ ಅಭಿವೃದ್ಧಿಗೊಳಿಸುವ ಅಗತ್ಯದ ಕುರಿತುಅವರು ಒತ್ತಿ ಹೇಳಿದರು.

‘ನಾವು ಲಿಂಗ ಸಮಾನತೆ ಸಾಧಿಸಬೇಕು ಮತ್ತು ಎಲ್ಲಾ ವರ್ಗಗಳ ಸಮಾನತೆಯನ್ನು ಸಾಧಿಸಬೇಕು. ಧರ್ಮದ ಹೆಸರಿನಲ್ಲಿ ಮಹಿಳೆಯರಿಗೆ ಕಾನೂನಾತ್ಮಕವಾಗಿ ಸಿಗುವ ಹಕ್ಕುಗಳನ್ನು ನಿರಾಕರಿಸುವಂತಿಲ್ಲ. ಎಲ್ಲಾ ವಿಷಯಗಳಲ್ಲೂ ಲಿಂಗ ಸಮಾನತೆ ಸಾಧಿಸದೇ ಮಾನವ ಹಕ್ಕುಗಳನ್ನು ಮನವರಿಕೆ ಮಾಡಿಕೊಳ್ಳುವುದು ದೂರದ ಕನಸಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.