ADVERTISEMENT

ಹಿಮಾಲಯ, ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣ: ಕೇಂದ್ರ ಸಚಿವ

ಪಿಟಿಐ
Published 2 ಏಪ್ರಿಲ್ 2023, 16:15 IST
Last Updated 2 ಏಪ್ರಿಲ್ 2023, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಲಿಗುರಿ (ಪಶ್ಚಿಮ ಬಂಗಾಳ): ಹಿಮಾಲಯ ಮತ್ತು ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣಗಳನ್ನು (ಟ್ರೇಲ್‌) ತೆರೆಯಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್‌ ರೆಡ್ಡಿ ಭಾನುವಾರ ತಿಳಿಸಿದರು.

ಜಿ20ಯ ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ವರ್ಷವೇ ಈ ಎರಡು ತಾಣಗಳನ್ನು ಪ್ರವಾಸಿಗರಿಗಾಗಿ ತೆರೆಯಲಾಗುವುದು. ಅದಕ್ಕಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೆಗಳ ಜೊತೆಗೂಡಿ ಕೆಲಸ ಮಾಡಲಿದೆ ಎಂದರು.

ಈ ಎರಡು ಟ್ರೇಲ್‌ಗಳನ್ನು ಮೊದಲಿಗೆ ತೆರೆಯಲಾಗುವುದು. ಮುಂದಿನ ದಿನಗಳಲ್ಲಿ ಇತರ ಕಡೆಗಳಲ್ಲೂ ಟ್ರೇಲ್‌ಗಳನ್ನು ಆರಂಭಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಅಮರಕಂಟಕದಿಂದ ಅರಬ್ಬೀ ಸಮುದ್ರದವರೆಗೆ ನರ್ಮದಾ ಟ್ರೇಲ್‌. ಕಾವೇರಿ ನದಿ ಟ್ರೇಲ್‌, ಕಚ್‌ನಿಂದ ಕನ್ಯಾಕುಮಾರಿವರೆಗೆ ಪಶ್ಚಿಮ ಕರಾವಳಿ ಟ್ರೇಲ್‌ ಮತ್ತು ಪಶ್ಚಿಮ ಬಂಗಾಳದಿಂದ ಕನ್ಯಾಕುಮಾರಿವರೆಗೆ ಪೂರ್ವ ಕರಾವಳಿ ಟ್ರೇಲ್‌ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.