ADVERTISEMENT

G-20 ಶೃಂಗಸಭೆ: ವಿಶ್ವ ನಾಯಕರೊಂದಿಗೆ ಪ್ರಧಾನಿ ಮೋದಿ ಮ್ಯಾಂಗ್ರೋವ್ ಕಾಡಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 6:07 IST
Last Updated 16 ನವೆಂಬರ್ 2022, 6:07 IST
   

ಬಾಲಿ: ಜಿ–20 ಶೃಂಗಸಭೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಶ್ವ ನಾಯಕರು ಇಲ್ಲಿನ ಮ್ಯಾಂಗ್ರೋವ್ ಕಾಡಿಗೆ ಬುಧವಾರ ಭೇಟಿ ನೀಡಿದರು.

ಇದಕ್ಕೂ ಮುಂಚೆ ಅವರು ಸಸಿಗಳನ್ನು ನೆಟ್ಟರು. ಇದೇ ವೇಳೆಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೆಟ್ಟಿಲು ಹತ್ತುವಾಗ ಮುಗ್ಗರಿಸಿದರು. ಇಂಡೋನೆಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರನ್ನು ಹಿಡಿದುಕೊಂಡರು. ನಂತರ ಮ್ಯಾಂಗ್ರೋವ್ ಕಾಡಿನತ್ತ ಹೆಜ್ಜೆ ಹಾಕಿದರು.

ವಿಶ್ವ ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ:ಪ್ರಧಾನಿ ಮೋದಿ ಅವರು ಸೆನೆಗಲ್ ಗಣರಾಜ್ಯದ ಅಧ್ಯಕ್ಷ ಮ್ಯಾಕಿ ಸಾಲ್, ನೆದರ್‌ಲ್ಯಾಂಡ್‌ನ ಪಿಎಂ ಮಾರ್ಕ್ ರುಟ್ಟೆ, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ, ಯುಎಸ್ ಅಧ್ಯಕ್ಷ ಜೋ ಬೈಡನ್ ಹಾಗು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರನ್ನು ಮಾಡಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.