
ಡ್ರೋಗ್ ಪ್ಯಾರಚೂಟ್
-ಇಸ್ರೊ ಚಿತ್ರ
ಬೆಂಗಳೂರು: ಇಸ್ರೋದ ಗಗನಯಾನ ಸಿಬ್ಬಂದಿ ನೌಕೆಯ ವೇಗ ನಿಯಂತ್ರಣಕ್ಕೆ ತಯಾರಿಸಲಾದ ಡ್ರೋಗ್ ಪ್ಯಾರಾಚೂಟ್‌ಗಳಿಗಾಗಿ ಅರ್ಹತಾ ಪರೀಕ್ಷೆಗಳ ಸರಣಿಯು ಯಶಸ್ವಿಯಾಗಿವೆ ಎಂದು ಬಾಹ್ಯಾಕಾಶ ಸಂಸ್ಥೆ ಶನಿವಾರ ತಿಳಿಸಿದೆ.
ಈ ಪರೀಕ್ಷೆಗಳನ್ನು ಡಿಸೆಂಬರ್ 18 ಮತ್ತು 19 ರಂದು ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯದ (ಟಿಬಿಆರ್‌ಎಲ್) ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (ಆರ್‌ಟಿಆರ್‌ಎಸ್) ಸೌಲಭ್ಯದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಗಗನಯಾನ ಸಿಬ್ಬಂದಿ ನೌಕೆಯ ವೇಗ ನಿಯಂತ್ರಣ ವ್ಯವಸ್ಥೆಯು ನಾಲ್ಕು ವಿಧದ ಒಟ್ಟು 10 ಪ್ಯಾರಾಚೂಟ್‌ಗಳನ್ನು ಒಳಗೊಂಡಿದೆ ಎಂದು ಇಸ್ರೊ ಹೇಳಿಕೆಯಲ್ಲಿ ತಿಳಿಸಿದೆ.
ನೌಕೆಯ ಸುರಕ್ಷಿತ ಲ್ಯಾಂಡಿಂಗ್ ಅನ್ನು ಈ ಡ್ರೋಗ್ ಪ್ಯಾರಚೂಟ್ ಗಳು ಖಚಿತಪಡಿಸಿಕೊಳ್ಳುತ್ತವೆ.
ಸಂಕಷ್ಟದ ಪರಿಸ್ಥಿತಿಗಳಲ್ಲಿ ಡ್ರೋಗ್ ಪ್ಯಾರಾಚೂಟ್‌ಗಳ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಗಿದೆ. ಡ್ರೋಗ್ ಪ್ಯಾರಾಚೂಟ್‌ಗಳ ಮೇಲಿನ ಎರಡೂ ಆರ್‌ಟಿಆರ್‌ಎಸ್ ಪರೀಕ್ಷೆಗಳನ್ನು 2025ರ ಡಿಸೆಂಬರ್ 18 ಮತ್ತು 19 ರಂದು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೋ ಹೇಳಿದೆ.
ಮಾನವ ಬಾಹ್ಯಾಕಾಶ ಯಾನಕ್ಕೆ ಪ್ಯಾರಾಚೂಟ್ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಇದೊಂದು ಮಹತ್ವದ ಹೆಜ್ಜೆ ಎಂದು ಇಸ್ರೊ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.