ADVERTISEMENT

ಪಾತಕಿ ಜೋಗಿಂದರ್‌ ಭಾರತಕ್ಕೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 16:07 IST
Last Updated 2 ಫೆಬ್ರುವರಿ 2025, 16:07 IST
ಜೋಗಿಂದರ್‌ ಗ್ಯೋಂಗ್‌
ಜೋಗಿಂದರ್‌ ಗ್ಯೋಂಗ್‌   

ನವದೆಹಲಿ: ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಪಾತಕಿ ಜೋಗಿಂದರ್‌ ಗ್ಯೋಂಗ್‌ನನ್ನು ಫಿಲಿಪ್ಪೀನ್ಸ್‌ನಿಂದ ಕರೆತರಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಜೋಗಿಂದರ್‌ನನ್ನು ಸದ್ಯ ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿದೆ. ಈತನ ವಿರುದ್ಧ ದರೋಡೆ, ಕೊಲೆ ಯತ್ನ, ಸುಲಿಗೆಗಾಗಿ ಅಪಹರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಸಿಬಿಐ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಜೋಗಿಂದರ್‌ನನ್ನು ಭಾರತಕ್ಕೆ ವಾಪಸು ಕರೆತರಲು ಕಳೆದ ವರ್ಷ ಅಕ್ಟೋಬರ್‌ 25ರಂದು ‘ರೆಡ್ ಕಾರ್ನರ್’ ನೋಟಿಸ್ ಹೊರಡಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಫಿಲಿಪ್ಪೀನ್ಸ್‌ನ ‘ವಲಸೆ ಅಧಿಕಾರಿ’ಗಳು ಈತನನ್ನು ಬಂಧಿಸಿ, ಭಾರತಕ್ಕೆ ಹಸ್ತಾಂತರ ಮಾಡಿದ್ದಾರೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈತ ಕ್ರಿಮಿನಲ್‌ ಸಂಚು ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹರಿಯಾಣ ಹಾಗೂ ದೆಹಲಿ ಪೊಲೀಸರಿಗೆ ಬೇಕಾಗಿದ್ದ.

ಶಸ್ತ್ರಾಸ್ತ್ರಗಳ ಅಕ್ರಮ ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಜೋಗಿಂದರ್‌, 2017ರ ಡಿಸೆಂಬರ್‌ನಲ್ಲಿ ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿದ್ದ ವೇಳೆ ಕೊಲೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.