ADVERTISEMENT

ಕೊಚ್ಚಿಯ ಬ್ಯೂಟಿ ಪಾರ್ಲರ್‌ ದಾಳಿ ಪ್ರಕರಣ: ತಪ್ಪೊಪ್ಪಿಕೊಂಡ ರವಿ ಪೂಜಾರಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 17:31 IST
Last Updated 9 ಜೂನ್ 2021, 17:31 IST
ರವಿ ಪೂಜಾರಿ
ರವಿ ಪೂಜಾರಿ   

ಕೊಚ್ಚಿ: 2018ರ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ ಪ್ರಕರಣದಲ್ಲಿ ತಮ್ಮ ಪಾತ್ರ ಇರುವುದಾಗಿ ಭೂಗತ ಪಾತಕಿ ರವಿ ಪೂಜಾರಿ ತಪ್ಪೊಪ್ಪಿಕೊಂಡಿರುವುದಾಗಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎರ್ನಾಕುಲಂನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ (ಆರ್ಥಿಕ ಅಪರಾಧಗಳು) ಮಂಗಳವಾರ ಎಟಿಎಸ್‌ ವರದಿ ಸಲ್ಲಿಸಿದ್ದು, ರವಿ ಪೂಜಾರಿಯನ್ನು ಪೊಲೀಸ್ ಕಸ್ಟಡಿಯಲ್ಲಿದ್ದಾಗ ವಿವರವಾಗಿ ವಿಚಾರಣೆ ನಡೆಸಲಾಗಿದೆ ತಿಳಿಸಿದೆ.

2010ರಲ್ಲಿ ಕಾಸರಗೋಡಿನ ಬೇವಿಂಜೆ‌ಯಲ್ಲಿ ಚಿನ್ನದ ಉದ್ಯಮಿ ಮನೆಯಲ್ಲಿ ನಡೆದ ದಾಳಿ ಪ್ರಕರಣ ಸಂಬಂಧ ಆತನ ಪಾತ್ರವೇನು ಎಂದು ಪ್ರಶ್ನಿಸಲಾಗಿದೆ.

ADVERTISEMENT

2018ರ ಡಿಸೆಂಬರ್‌ನಲ್ಲಿ ನಟಿ ಲೀನಾ ಮಾರಿಯಾ ಪೌಲ್‌ ಒಡೆತನದ ಬ್ಯೂಟಿ ಪಾರ್ಲರ್‌ ಮೇಲೆ ನಡೆದ ದಾಳಿಯ ತನಿಖೆಯ ಭಾಗವಾಗಿ ಕಳೆದ ಬುಧವಾರ ರವಿ ಪೂಜಾರಿ ಅವರನ್ನು ಬೆಂಗಳೂರಿನಿಂದ ಕೊಚ್ಚಿಗೆ ಕರೆತರಲಾಯಿತು.

ಮಂಗಳವಾರ ತನ್ನ ಕಸ್ಟಡಿ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಪೂಜಾರಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಾಪಸ್ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.