ADVERTISEMENT

ಕೊಲೆ, ಡ್ರಗ್ಸ್ ಸೇರಿ 37 ಕೇಸ್‌ಗಳ ಆರೋಪಿ ಮುಂಬೈ ಪೊಲೀಸ್ ಬಲೆಗೆ

ಪಿಟಿಐ
Published 7 ಮಾರ್ಚ್ 2022, 11:35 IST
Last Updated 7 ಮಾರ್ಚ್ 2022, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೊಲೆ ಹಾಗೂ ಮಾದಕ ದ್ರವ್ಯದ ಕಳ್ಳಸಾಗಣೆ ಸೇರಿದಂತೆ 37 ಪ್ರಕರಣಗಳನ್ನು ಎದುರಿಸುತ್ತಿದ್ದ ಗ್ಯಾಂಗ್‌ಸ್ಟರ್ ಇಲಿಯಾಸ್ ಬಚ್ಕನಾ ಎಂಬ ಆರೋಪಿಯನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಲ್ಲದೆ, ಕಳೆದ ವರ್ಷದ ಏಪ್ರಿಲ್‌ನಲ್ಲಿ ನಡೆದ ಕೊಲೆ ಯತ್ನ ಪ್ರಕರಣ ಸಂಬಂಧ ಈ ವ್ಯಕ್ತಿಯನ್ನು ಮುಂಬೈನ ಬೈಕುಲ್ಲಾ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಅಂತರರಾಜ್ಯ ಖದೀಮನಾಗಿದ್ದ ಇಲಿಯಾಸ್ ಬಚ್ಕನಾನನ್ನು ಕರ್ನಾಟಕ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸ್ ಇಲಾಖೆಯ ಗುಪ್ತಚರದಳ(ಸಿಐಯು) ಶನಿವಾರ ಸಂಜೆ ಬಂಧಿಸಿದೆ.ಕೊಲೆ, ಕಳ್ಳತನ, ದರೋಡೆ, ಮಾದಕ ದ್ರವ್ಯ ಕಳ್ಳಸಾಗಣೆ ಹಾಗೂ ಮೋಕಾ ಕಾಯ್ದೆ ಸೇರಿದಂತೆ 37 ಪ್ರಕರಣಗಳಲ್ಲಿ ಈ ಆರೋಪಿಯನ್ನು ಪೊಲೀಸರು ಶೋಧಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ರಾಜು ಲುಲಾಡಿಯಾ(47) ಎಂಬ ವ್ಯಕ್ತಿಯ ಮೇಲೆ ಮೂವರು ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಲ್ಲದೆ ಆತನನ್ನು ಕೊಲೆಗೈಯ್ಯುವುದಾಗಿ ಬಚ್ಕನಾ ಬೆದರಿಕೆಯೊಡ್ಡಿದೆ. ಈ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಬಚ್ಕನಾ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.