ADVERTISEMENT

ಜಾರ್ಜ್‌ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:36 IST
Last Updated 31 ಜನವರಿ 2019, 20:36 IST

ನವದೆಹಲಿ:ಮಂಗಳವಾರ ನಿಧನರಾದ ಹಿರಿಯ ಸಮಾಜವಾದಿ ಹಾಗೂ ರಕ್ಷಣಾ ಖಾತೆ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರ ಅಂತ್ಯಕ್ರಿಯೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು.

ಜಾರ್ಜ್‌ ಅವರ ಚಿತಾಭಸ್ಮವನ್ನು ಪೃಥ್ವೀರಾಜ್ ರಸ್ತೆಯ ಕ್ರೈಸ್ತ ಸ್ಮಶಾನದಲ್ಲಿ ಶುಕ್ರವಾರ ಸಮಾಧಿ ಮಾಡಲಾಗುವುದು.

ಅವರ ‘ಪಂಚಶೀಲ’ ನಿವಾಸದಿಂದ ಸೇನಾ ವಾಹನದ ಮೂಲಕ ಚಿತಾಗಾರದವರೆಗೆ ಪಾರ್ಥಿವ ಶರೀರವನ್ನು ಮರದ ಪೆಟ್ಟಿಗೆಯಲ್ಲಿರಿಸಿ ಮೆರವಣಿಗೆ ಮೂಲಕ ತರಲಾಯಿತು. ‘ಜಾರ್ಜ್‌ ಸರ್‌ ಅಮರ್‌ ರಹೇ’ ಹಾಗೂ ‘ಸೂರ್ಯ–ಚಂದ್ರ ಇರುವವರೆಗೆ ಜಾರ್ಜ್‌ ಅವರ ಹೆಸರು ಇರಲಿದೆ’ ಎಂಬ ಘೋಷಣೆಗಳನ್ನು ಅವರ ಅಭಿಮಾನಿಗಳು ಕೂಗಿದರು.

ADVERTISEMENT

ಅವರ ಪತ್ನಿ ಲೈಲಾ ಕಬೀರ್‌, ಪುತ್ರ ಸಿಯಾನ್‌ ಮತ್ತು ಪರ್ನಾಂಡಿಸ್‌ ಅವರ ಸಹೋದರರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ರಾಂ ವಿಲಾಸ್‌ ಪಾಸ್ವಾನ್‌, ರವಿಶಂಕರ್‌ ಪ್ರಸಾದ್‌, ಹರ್ಷ ವರ್ಧನ್‌, ಹಿರಿಯ ನಾಯಕರಾದ ಶರದ್‌ ಯಾದವ್‌, ಉಪೇಂದ್ರ ಕುಶ್ವಾಹ, ಜಾರ್ಜ್‌ ಅವರ ನಿಕಟವರ್ತಿ ಜಯಾ ಜೇಟ್ಲಿ, ಮಾಜಿ ಕ್ರಿಕೆಟಿಗ ಅಜಯ್‌ ಜಡೇಜ ಸೇರಿ ಮುಂತಾದವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.