ADVERTISEMENT

ಫರ್ನಾಂಡಿಸ್‌ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 18:47 IST
Last Updated 30 ಜನವರಿ 2019, 18:47 IST
ಜಾರ್ಜ್‌ ಫರ್ನಾಂಡಿಸ್‌
ಜಾರ್ಜ್‌ ಫರ್ನಾಂಡಿಸ್‌   

ನವದೆಹಲಿ: ಮಂಗಳವಾರ ನಿಧನರಾದ ಹಿರಿಯ ಸಮಾಜವಾದಿ ಹಾಗೂ ರಕ್ಷಣಾ ಖಾತೆ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರ ಅಂತ್ಯಕ್ರಿಯೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ಅವರ ‘ಪಂಚಶೀಲ’ ನಿವಾಸದಲ್ಲಿ ಪ್ರಾರ್ಥನೆ ನಡೆಯಲಿದೆ. ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರಿಂದ ಸೇನಾ ವಾಹನದ ಮೂಲಕ ಚಿತಾಗಾರದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ ಎಂದು ಅವರ ಪತ್ನಿ ಲೈಲಾ ಕಬೀರ್‌ ನಿಕಟವರ್ತಿಗಳು ತಿಳಿಸಿದ್ದಾರೆ.

ಜಾರ್ಜ್‌ ಅವರ ಚಿತಾಭಸ್ಮವನ್ನು ಪೃಥ್ವೀರಾಜ್ ರಸ್ತೆಯ ಕ್ರೈಸ್ತ ಸ್ಮಶಾನದಲ್ಲಿ ಫೆ. 1ರಂದು ಸಮಾಧಿ ಮಾಡಲಾಗುವುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.