ADVERTISEMENT

Goa Assembly Elections: ಬಿಜೆಪಿ ತೊರೆದ ಪರಿಕ್ಕರ್ ಪುತ್ರ

ಗೋವಾ: ಪಕ್ಷೇತರ ಅಭ್ಯರ್ಥಿಯಾಗಿ ಉತ್ಪಲ್ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 18:44 IST
Last Updated 21 ಜನವರಿ 2022, 18:44 IST
ಉತ್ಪಲ್ ಪರಿಕ್ಕರ್
ಉತ್ಪಲ್ ಪರಿಕ್ಕರ್   

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಬಿಜೆಪಿ ತೊರೆಯುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ‘ಪಣಜಿ ಕ್ಷೇತ್ರದಿಂದ ಟಿಕೆಟ್‌ ನೀಡದೇ ಇರುವುದಕ್ಕೇ ಪಕ್ಷವನ್ನು ತೊರೆಯುತ್ತಿದ್ದೇನೆ. ಪಣಜಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘30 ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಲಾಗಿದೆ. ನನ್ನ ತಂದೆಯವರ ನಿಧನದ ನಂತರ ಉಪಚುನಾವಣೆಗೆ ಸ್ಪರ್ಧಿಸಲು ನನಗೆ ಟಿಕೆಟ್ ನಿರಾಕರಿಸಲಾಯಿತು. ಪಕ್ಷಕ್ಕಾಗಿ ನಾನು ದುಡಿಯಬೇಕು ಎಂದು ಹೇಳಲಾಯಿತು. ಈಗ ಮತ್ತೆ ಅದೇ ಮಾತನ್ನು ಹೇಳುತ್ತಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಲಾಗಿದೆ’ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಪಣಜಿ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಉತ್ಪಲ್ ಕೇಳಿಕೊಂಡಿದ್ದರು. ಅದನ್ನು ಬಿಜೆಪಿ ನಿರಾಕರಿಸಿತ್ತು. ಬದಲಿಗೆ ಬೇರೆ ಎರಡು ಕ್ಷೇತ್ರಗಳ ಆಯ್ಕೆ ನೀಡುವುದಾಗಿ ಹೇಳಿತ್ತು. ಗೋವಾ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡಣವೀಸ್ ಅವರು, ‘ಉತ್ಪಲ್‌ಗೆ ಆ ಸಾಮರ್ಥ್ಯವಿಲ್ಲ. ಅವರು ಪಕ್ಷಕ್ಕಾಗಿ ಇನ್ನೂ ದುಡಿಯಬೇಕು’ ಎಂದು ಹೇಳಿದ್ದರು.

ADVERTISEMENT

‘ನನಗೆ ರಾಜಕೀಯ ಪಕ್ಷ ಎಂದು ಇದ್ದದ್ದು ಬಿಜೆಪಿ ಮಾತ್ರ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.