ADVERTISEMENT

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿ ತೊರೆದ ಮೂರನೇ ಶಾಸಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2022, 12:13 IST
Last Updated 10 ಜನವರಿ 2022, 12:13 IST
ಮೈಕಲ್‌ ಲೋಬೊ
ಮೈಕಲ್‌ ಲೋಬೊ   

ಪಣಜಿ: ಗೋವಾ ವಿಧಾನಸಭೆ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಶಾಸಕ ಹಾಗೂ ಸಚಿವ ಮೈಕಲ್‌ ಲೋಬೊ ತಮ್ಮ ಸ್ಥಾನಕ್ಕೆರಾಜೀನಾಮೆ ನೀಡಿದ್ದಾರೆ.

ಮೈಕಲ್‌ ಲೋಬೊ ಅವರು ಕಲ್ಲಂಗೂಟ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು ಮತ್ತು ಗೋವಾ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಅವರು ಕಾಂಗ್ರೆಸ್‌ ಸೇರುವ ಕುರಿತ ವದಂತಿಗಳು ದಟ್ಟವಾಗಿವೆ. ಆದರೆ, ಲೋಬೊ ಅವರು ಭವಿಷ್ಯದ ಯೋಜನೆಗಳ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲವೆಂದು ತಿಳಿಸಿದ್ದಾರೆ.

ಲೋಬೊ ಅವರು ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಗೋವಾದ ಕಾಂಗ್ರೆಸ್ ಮುಖಂಡರು ಖಚಿತಪಡಿಸಿದ್ದಾರೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಂಪುಟದಿಂದ ಹೊರನಡೆದ ಮೂರನೇ ಶಾಸಕರು ಲೋಬೊ. ಈ ಹಿಂದೆ ಅಲೀನಾ ಸಲ್ಡಾನಾ ಮತ್ತು ಕಾರ್ಲೋಸ್‌ ಅಲ್ಮೆಡಾ ಬಿಜೆಪಿ ತೊರೆದಿದ್ದರು.

ADVERTISEMENT

ಸಲ್ಡಾನಾ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರೆ, ಅಲ್ಮೆಡಾ ಹಾಗೂ ಪಕ್ಷೇತರ ಶಾಸಕ ಪ್ರಸಾದ್ ಗಾಂವ್ಕರ್ ಕಾಂಗ್ರೆಸ್ ಸೇರಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಫೆಬ್ರುವರಿ 14 ರಂದು 11.6 ಲಕ್ಷ ಮಂದಿ ಮತ ಚಲಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.