ADVERTISEMENT

ಗೋವಾ | ಅಂಗಡಿ ಫಲಕದಲ್ಲಿ ಪಾಕ್‌ ಪರ ಘೋಷಣೆ: 9 ಮಂದಿ ಬಂಧನ

ಪಿಟಿಐ
Published 5 ನವೆಂಬರ್ 2025, 14:09 IST
Last Updated 5 ನವೆಂಬರ್ 2025, 14:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಣಜಿ: ಗೋವಾದ ಎರಡು ಅಂಗಡಿಗಳ ಫಲಕಗಳಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಪ್ರದರ್ಶಿಸಿದ್ದ ಘಟನೆಗೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಗೋವಾ ಜಿಲ್ಲೆಯ ಬಾಗಾ ಹಾಗೂ ಅರ್ಪೊರ ಗ್ರಾಮಗಳಲ್ಲಿರುವ ಅಂಗಡಿಗಳ ಎಲ್‌ಇಡಿ ಫಲಕಗಳಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆಯನ್ನು ಪ್ರದರ್ಶಿಸಲಾಗುತ್ತಿದೆ ಎಂದು ಕೆಲ ಸ್ಥಳೀಯರು ಮಂಗಳವಾರ ಸಂಜೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದರು.   

ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಎರಡೂ ಅಂಗಡಿಗಳಿಗೆ ಸಂಬಂಧಿಸಿದ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಎಲ್‌ಇಡಿ ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.