ADVERTISEMENT

ಗೋವಾದಲ್ಲಿ ವಿದೇಶಿ ಮಹಿಳೆಗೆ ಕಿರುಕುಳ: ಪಿರಿಯಾಪಟ್ಟಣ ತಾಲ್ಲೂಕಿನ ಮೂವರ ಬಂಧನ

ಪಿಟಿಐ
Published 12 ನವೆಂಬರ್ 2025, 15:47 IST
Last Updated 12 ನವೆಂಬರ್ 2025, 15:47 IST
   

ಪಣಜಿ: ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ ವಿದೇಶದ ಮಹಿಳಾ ಪ್ರವಾಸಿಗರಿಬ್ಬರಿಗೆ ಕಿರುಕುಳ ನೀಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಬೆನ್ನಿಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮೂವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ರಾವಂದೂರು ಹೋಬಳಿಯ ಬೋಗನಹಳ್ಳಿಯ ಕಾರ್ತಿಕ್‌ ಬಿ.ಆರ್‌. (28), ಬಿ.ಎನ್‌. ಸಂತೋಷ್ (33), ರವಿ ಬಿ.ಎನ್‌. ಬಂಧಿತರು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಉತ್ತರ ಗೋವಾದ ಅರಂಬೋಲ್‌ ಬೀಚ್‌ನಲ್ಲಿ ವಿಹರಿಸುತ್ತಿದ್ದ ವಿದೇಶದ ಮಹಿಳಾ ಪ್ರವಾಸಿಗರೊಟ್ಟಿಗೆ ಫೋಟೊಗಳನ್ನು ತೆಗೆದುಕೊಳ್ಳಲು ಈ ಮೂವರು ಯತ್ನಿಸಿದ್ದು, ತಮ್ಮ ಭುಜಗಳ ಮೇಲೆ ಕೈಇಟ್ಟು ಫೋಸ್‌ ಕೊಡುವಂತೆ ಒತ್ತಾಯಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ADVERTISEMENT

ಪ್ರಕರಣದ ಸೂಕ್ಷ್ಮತೆ ಹಾಗೂ ರಾಜ್ಯಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯನ್ನು ಪರಿಗಣಿಸಿದ ಗೋವಾ ಪ್ರವಾಸಿ ಪೊಲೀಸರು, ವಿಡಿಯೊ ಕ್ಲಿಪ್ಪಿಂಗ್ ಆಧಾರದಡಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಂತ್ರಿಕ ಕಣ್ಗಾವಲು ಮತ್ತು ಸ್ಥಳೀಯ ಮೂಲಗಳ ಸಹಕಾರದಿಂದ ಮಾಂಡ್ರೆಮ್ ಪೊಲೀಸರು ಆರೋಪಿಗಳನ್ನು ಕರ್ನಾಟಕದ ಬೆಂಗಳೂರು, ಮೈಸೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.