ADVERTISEMENT

ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ₹ 4.11 ಕೋಟಿ ಮೌಲ್ಯದ ಚಿನ್ನ ವಶ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 14:31 IST
Last Updated 11 ನವೆಂಬರ್ 2022, 14:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಯಮತ್ತೂರು, ತಮಿಳುನಾಡು: ‘ಸಿಂಗಪುರದಿಂದ ಆಗಮಿಸಿದ 20 ಪ್ರಯಾಣಿಕರ ಗುಂಪಿನಿಂದ ₹ 4.11 ಕೋಟಿ ಮೌಲ್ಯದ 7.7 ಕೆ.ಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ’ ಎಂದು ಅಧಿಕೃತ ಪ್ರಕಟಣೆಯೊಂದು ಹೇಳಿದೆ.‌

‘ಖಚಿತ ಮಾಹಿತಿ ಆಧಾರದ ಮೇಲೆ, ನವೆಂಬರ್‌ 9ರಂದು ಪ್ರಯಾಣಿಕರನ್ನು ಹಾಗೂ ಬ್ಯಾಗ್‌ಗಳನ್ನು ತಪಾಸಣೆಗೊಳಪಡಿಸಲಾಗಿತ್ತು. ಪ್ಯಾಂಟ್‌ ಜೇಬು, ಒಳ ಉಡುಪುಗಳು ಹಾಗೂ ಬ್ಯಾಗ್‌ಗಳಲ್ಲಿ ಕಚ್ಚಾ ಚೈನ್‌ ರೂಪದಲ್ಲಿದ್ದ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT