ADVERTISEMENT

Republic Day | ವಿಶೇಷ ಡೂಡಲ್‌ ಮೂಲಕ ಗಣರಾಜ್ಯೋತ್ಸವ ಸಂಭ್ರಮಿಸಿದ ಗೂಗಲ್‌

ಪಿಟಿಐ
Published 26 ಜನವರಿ 2025, 2:33 IST
Last Updated 26 ಜನವರಿ 2025, 2:33 IST
   

ನವದೆಹಲಿ: ದೇಶದಾದ್ಯಂತ ಇಂದು (ಭಾನುವಾರ) 76ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ದೈತ್ಯ ಸರ್ಚ್‌ ಎಂಜಿನ್‌ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದೆ.

ಗೂಗಲ್‌ ವಿಶೇಷ ಸಂದರ್ಭಗಳಲ್ಲಿ ತನ್ನ ಡೂಡಲ್ ಅನ್ನು ಬದಲಾಯಿಸುತ್ತದೆ. ಇಂದು ಕೂಡ ತನ್ನ ಡೂಡಲ್ ಅನ್ನು ಬದಲಾಯಿಸಿದ್ದು, ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳನ್ನು ಒಳಗೊಂಡ ಚಿತ್ರವನ್ನು ಹಂಚಿಕೊಂಡಿದೆ.

ಲಡಾಖಿ ಉಡುಗೆಯಲ್ಲಿರುವ ಹಿಮ ಚಿರತೆ, ಸಾಂಪ್ರದಾಯಿಕ ವಾದ್ಯವನ್ನು ಹಿಡಿದಿರುವ, ಧೋತಿ–ಕುರ್ತಾ ಧರಿಸಿರುವ ಹುಲಿ, ನವಿಲು, ಮೊಸಳೆ ಸೇರಿದಂತೆ ಹಲವು ಪ್ರಾಣಿಗಳನ್ನು ಒಳಗೊಂಡ ವರ್ಣರಂಜಿತ ಕಲಾಕೃತಿಯ ಡೂಡಲ್‌ ‘ವನ್ಯಜೀವಿ ಮೆರವಣಿಗೆ’ಯ ನೋಟವನ್ನು ನೀಡುತ್ತದೆ.

ADVERTISEMENT

ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ಆಕರ್ಷಕ ಪಥ ಸಂಚಲನ ನಡೆಯಲಿದೆ. ದೇಶದ ವಿವಿಧ ರಾಜ್ಯಗಳ ಕಲಾತ್ಮಕ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.