ADVERTISEMENT

ಡಾ.ಕಫೀಲ್‌ ಖಾನ್‌ ನಿರ್ದೋಷಿ

ಗೋರಖ್‌ಪುರ: 70 ಶಿಶುಗಳ ಸಾವು ಪ್ರಕರಣ

ಪಿಟಿಐ
Published 27 ಸೆಪ್ಟೆಂಬರ್ 2019, 18:42 IST
Last Updated 27 ಸೆಪ್ಟೆಂಬರ್ 2019, 18:42 IST
ಡಾ. ಕಫೀಲ್‌
ಡಾ. ಕಫೀಲ್‌   

ಗೋರಖ್‌ಪುರ: ಇಲ್ಲಿನ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುಮಾರು 70 ಶಿಶುಗಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಕಫೀಲ್ ಖಾನ್ ಅವರನ್ನು ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿಯು ಆರೋಪ ಮುಕ್ತಗೊಳಿಸಿದೆ.

2007ರಲ್ಲಿ ನಡೆದಿದ್ದ ಈ ಅವಘಡದ ಬಳಿಕ ಡಾ.ಖಾನ್‌ ಅವರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಳಿಸಿ ಬಂಧಿಸಲಾಗಿತ್ತು. ಆಮ್ಲಜನಕದ ಕೊರತೆಯಿಂದ ಶಿಶುಗಳ ಸಾವು ಸಂಭವಿಸಿದೆ. ಬಿಲ್ ಬಾಕಿ ಇದ್ದ ಕಾರಣ ಆಸ್ಪತ್ರೆಗೆ ಆಮ್ಲಜನಕದ ಸಿಲಿಂಡರ್ ಪೂರೈಕೆಯನ್ನು ಕಂಪನಿ ಸ್ಥಗಿತಗೊಳಿಸಿದ್ದು ಇದಕ್ಕೆ ಕಾರಣ ಎನ್ನಲಾಗಿತ್ತು. ಇದನ್ನು ಸರ್ಕಾರ ತಳ್ಳಿಹಾಕಿತ್ತು.

ವಿವಿಧ ಅನಾರೋಗ್ಯ ಸಮಸ್ಯೆಯಿಂದಾಗಿ ಶಿಶುಗಳು ಸತ್ತಿವೆ ಎಂದು ಸರ್ಕಾರ ಪ್ರತಿಪಾದಿಸಿತ್ತು.‘ಡಾ. ಖಾನ್‌ ಅವರು, ಆಸ್ಪತ್ರೆಯ ನೋಡಲ್‌ ಅಧಿಕಾರಿ ಆಗಿರಲಿಲ್ಲ. ಅಥವಾ ಆಮ್ಲಜನಕ ಸಿಲಿಂಡರ್ ಪೂರೈಸುವ ಟೆಂಡರ್‌ ನೀಡುವ ಪ್ರಕ್ರಿಯೆ
ಯಲ್ಲಿ ಭಾಗಿಯಾಗಿರಲಿಲ್ಲ. ಆಮ್ಲಜನಕ ಸಿಲಿಂಡರ್ ಕೊರತೆ ಬಗ್ಗೆ ಅವರೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು’ ಎಂದೂ ತನಿಖಾ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.