ADVERTISEMENT

ತಮಿಳುನಾಡು: ಮಸೂದೆ ವಾಪಸ್‌ ಕಳುಹಿಸಿದ ರಾಜ್ಯಪಾಲ

ಪಿಟಿಐ
Published 16 ನವೆಂಬರ್ 2023, 13:45 IST
Last Updated 16 ನವೆಂಬರ್ 2023, 13:45 IST
ಆರ್‌.ಎನ್‌ ರವಿ
ಆರ್‌.ಎನ್‌ ರವಿ   

ಚೆನ್ನೈ: ರಾಜ್ಯಪಾಲ ಆರ್‌.ಎನ್‌. ರವಿ ಅವರು ಅಂಕಿತ ಹಾಕಲು ನಿರಾಕರಿಸಿ ವಾಪಸ್‌ ಕಳುಹಿಸಿರುವ ಮಸೂದೆಗಳನ್ನು ಮತ್ತೆ ಅಂಗೀಕರಿಸಲು ನವೆಂಬರ್‌ 18ರಂದು ತಮಿಳುನಾಡು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ.

ತಿರುವಣ್ಣಾಮಲೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭಾ ಅಧ್ಯಕ್ಷ ಎಂ. ಅಪ್ಪಾವು, ‘ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡಿಲ್ಲ. ಹಾಗಾಗಿ, ಶನಿವಾರ ನಡೆಯುವ ಅಧಿವೇಶನದಲ್ಲಿ ಮತ್ತೆ ಮಂಡಿಸಲಾಗುತ್ತದೆ’ ಎಂದರು.

12 ಮಸೂದೆಗಳು, ನಾಲ್ಕು ಸರ್ಕಾರಿ ಆದೇಶಗಳು ಸೇರಿದಂತೆ 52 ಕೈದಿಗಳನ್ನು ಅವಧಿಪೂರ್ಣ ಬಿಡುಗಡೆಗೆ ಸಂಬಂಧಿಸಿದ ಪ್ರಸ್ತಾವವು ರಾಜ್ಯಪಾಲರ ಒಪ್ಪಿಗೆಗೆ ರಾಜಭವನದಲ್ಲಿ ಕಾದುಕುಳಿತಿದೆ.  

ADVERTISEMENT

ರಾಜ್ಯಪಾಲರ ಈ ವಿಳಂಬ ಧೋರಣೆ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ‘ರಾಜ್ಯಪಾಲರ ನಡೆಯು ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ’ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.