ADVERTISEMENT

ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಆರು ಮಂದಿ ಸಾವು

ಪಿಟಿಐ
Published 17 ಡಿಸೆಂಬರ್ 2018, 16:30 IST
Last Updated 17 ಡಿಸೆಂಬರ್ 2018, 16:30 IST
ಆಸ್ಪತ್ರೆಯಿಂದ ರಕ್ಷಿಸಲಾದ ಮಹಿಳೆಯಿಂದ ಅಧಿಕಾರಿಯೊಬ್ಬರು ಮಾಹಿತಿ ಪಡೆದರು ರಾಯಿಟರ್ಸ್‌ ಚಿತ್ರ
ಆಸ್ಪತ್ರೆಯಿಂದ ರಕ್ಷಿಸಲಾದ ಮಹಿಳೆಯಿಂದ ಅಧಿಕಾರಿಯೊಬ್ಬರು ಮಾಹಿತಿ ಪಡೆದರು ರಾಯಿಟರ್ಸ್‌ ಚಿತ್ರ   

ಮುಂಬೈ: ಅಂಧೇರಿ ಹೊರವಲಯದ ಮರೋಲ್‌ನಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಆಸ್ಪತ್ರೆಗೆ ಬಂದಿದ್ದ100ಕ್ಕೂ ಹೆಚ್ಚು ರೋಗಿಗಳಿಗೆಗಾಯಗಳಾಗಿವೆ.

ಐದು ಅಂತಸ್ತಿನ ಕಟ್ಟಡದ 4ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ವೇಳೆ ರೋಗಿಗಳು ಸೇರಿದಂತೆ 108 ಮಂದಿ ಸಿಲುಕಿಕೊಂಡಿದ್ದರು. ಬಳಿಕ ಅವರನ್ನು ಅ‌ಗ್ನಿಶಾಮಕ ಸಿಬ್ಬಂದಿ ಏಣಿ ಬಳಸಿ ರಕ್ಷಿಸಿದರು ಎಂದು ಬೃಹನ್‌ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ನ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.