ADVERTISEMENT

ಕೋವಿಶೀಲ್ಡ್: ಎರಡು ಡೋಸ್‌ಗಳ ನಡುವೆ 12–16 ವಾರಗಳ ಅಂತರಕ್ಕೆ ತಜ್ಞರ ಶಿಫಾರಸು

ಪಿಟಿಐ
Published 13 ಮೇ 2021, 6:11 IST
Last Updated 13 ಮೇ 2021, 6:11 IST
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ ಲಸಿಕೆ–ಸಾಂದರ್ಭಿಕ ಚಿತ್ರ
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ ಲಸಿಕೆ–ಸಾಂದರ್ಭಿಕ ಚಿತ್ರ   

ನವದೆಹಲಿ: 'ಕೋವಿಶೀಲ್ಡ್‌' ಕೋವಿಡ್‌ ಲಸಿಕೆಯ ಡೋಸ್‌ಗಳ ನಡುವಿನ ಕಾಲಾವಧಿಯನ್ನು ಹೆಚ್ಚಿಸುವಂತೆ ಲಸಿಕೆ ವಿತರಣೆಗೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡವು (ಎನ್‌ಟಿಎಜಿಐ) ಶಿಫಾರಸು ಮಾಡಿದೆ.

ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದು 12ರಿಂದ 16 ವಾರಗಳಲ್ಲಿ ಎರಡನೇ ಡೋಸ್‌ ಹಾಕಿಸಿಕೊಳ್ಳಲು ಸರ್ಕಾರದ ಎನ್‌ಟಿಎಜಿಐ ಸಮಿತಿಯು ಶಿಫಾರಸು ಮಾಡಿದೆ. ಕೋವಿಶೀಲ್ಡ್‌ ಲಸಿಕೆಯ ಡೋಸ್‌ಗಳ ನಡುವೆ ಅಂತರ ಹೆಚ್ಚಿಸಲು ಅಭಿಪ್ರಾಯ ಪಟ್ಟಿದ್ದು, ಭಾರತ್‌ ಬಯೋಟೆಕ್‌ನ 'ಕೋವ್ಯಾಕ್ಸಿನ್‌' ಲಸಿಕೆಗೆ ಪ್ರಸ್ತುತ ನಿಗದಿ ಪಡಿಸಲಾಗಿರುವ ಅವಧಿಯ ಅಂತರದಲ್ಲಿ ಬದಲಾವಣೆ ಸೂಚಿಸಿಲ್ಲ.

ಪ್ರಸ್ತುತ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವೆ ನಾಲ್ಕರಿಂದ 8 ವಾರಗಳ ಅಂತರ ನೀಡಲಾಗುತ್ತಿದೆ.

ADVERTISEMENT

ಕೋವಿಡ್‌–19 ದೃಢಪಟ್ಟವರು ಮುಂದಿನ ಆರು ತಿಂಗಳ ವರೆಗೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದನ್ನು ಮುಂದೂಡುವಂತೆ ಸಮಿತಿಯು ಶಿಫಾರಸು ಮಾಡಿರುವುದಾಗಿ ಪಿಟಿಐ ವರದಿ ಮಾಡಿದೆ.

ಗರ್ಭಿಣಿಯರಿಗೆ ಕೋವಿಡ್‌–19 ಲಸಿಕೆ ಆಯ್ಕೆಗೆ ಅವಕಾಶ ಕಲ್ಪಿಸಬಹುದಾಗಿದೆ. ಗರ್ಭವತಿ ಮಗುವಿಗೆ ಜನ್ಮ ನೀಡಿದ ಬಳಿಕ ಯಾವುದೇ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದು ಸಮಿತಿಯು ಶಿಫಾರಸಿನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.