ADVERTISEMENT

ಖಾಸಗೀತನಕ್ಕೆ ಧಕ್ಕೆ- ಹೊಸದಾಗಿ ಚೀನಾದ ವಿವಿಧ 54 ಆ್ಯಪ್‌ಗಳಿಗೆ ನಿಷೇಧ

ಪಿಟಿಐ
Published 14 ಫೆಬ್ರುವರಿ 2022, 14:26 IST
Last Updated 14 ಫೆಬ್ರುವರಿ 2022, 14:26 IST
ಚೀನಾ ಬಾವುಟ
ಚೀನಾ ಬಾವುಟ   

ನವದೆಹಲಿ: ಭದ್ರತೆ ಮತ್ತು ಖಾಸಗೀತನಕ್ಕೆ ಧಕ್ಕೆ ಬರಲಿದೆ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಹೊಸದಾಗಿ ಚೀನಾದ 54 ಮೊಬೈಲ್‌ ಆ್ಯಪ್‌ಗಳಿಗೆ ನಿಷೇಧ ಹೇರಿದೆ. ಟೆನ್ಸೆಂಟ್‌ ಎಕ್ಸ್‌ರಿವರ್, ನೈಸ್‌ ವಿಡಿಯೊ ಬೈಡೂ, ವಿವಾ ವಿಡಿಯೊ ಎಡಿಟರ್ ಅಪ್ಲಿಕೇಷನ್‌ಗಳು ಇದರಲ್ಲಿ ಸೇರಿವೆ.

ಮೂಲಗಳ ಪ್ರಕಾರ, ಈ 54 ಅಪ್ಲಿಕೇಷನ್‌ಗಳ ಮೂಲಕ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಇವುಗಳನ್ನು ವೈರಿ ದೇಶದಲ್ಲಿ ನೆಲೆ ಇರುವ ಸರ್ವರ್‌ಗಳಿಗೆ ರವಾನಿಸಲಾಗುತ್ತಿತ್ತು. ಈ ಆ್ಯಪ್‌ಗಳು ದೇಶದ ಏಕತೆಗೆ ಭಂಗ ತರುವಂತದ್ದಾಗಿದ್ದವು ಎಂದು ತಿಳಿಸಿದೆ.

ಬ್ಯೂಟಿ ಕ್ಯಾಮೆರಾ, ಸ್ವೀಟ್ ಸೆಲ್ಫಿ ಎಚ್.ಡಿ, ಬ್ಯೂಟಿ ಕ್ಯಾಮೆರಾ, ರೈಸ್‌ ಆಫ್‌ ಕಿಂಗ್‌ಡಂ, ಲಾಸ್ಟ್‌ ಕ್ರುಸೆಡ್‌, ಗರೆನಾ ಫ್ರೀ ಫೈರ್–ಇಲ್ಯುಮಿನೇಟ್‌, ಆಸ್ಟ್ರಾಕ್ರಾಫ್ಟ್‌, ಫ್ಯಾನ್ಸಿಯು ಪ್ರೊ, ಮೂನ್ ಚಾಟ್, ಬಾರ್‌ಕೋಡ್‌ ಸ್ಕ್ಯಾನರ್, ಕ್ಯೂಆರ್ ಕೋಡ್‌ ಸ್ಕ್ಯಾನ್, ಲಿಕಾ ಕ್ಯಾಮ್‌ ಕೂಡಾ ಸೇರಿವೆ.

ADVERTISEMENT

ಹೆಚ್ಚಿನ ಸಂಖ್ಯೆಯ ಚೀನಾ ಆ್ಯಪ್‌ಗಳಿಗೆ ನಿಷೇಧ ಹೇರಿರುವ ಈ ವರ್ಷದ ಮೊದಲ ಕ್ರಮ ಇದಾಗಿದೆ. ಜೂನ್‌ 2020ರಲ್ಲಿ ಕೇಂದ್ರ ಸರ್ಕಾರವು ಟಿಕ್ ಟಾಕ್‌, ಯುಸಿ ಬ್ರೌಸರ್ ಒಳಗೊಂಡಂತೆ ಚೀನಾದ 59 ಆ್ಯಪ್‌ಗಳಿಗೆ ನಿಷೇಧ ಹೇರಿತ್ತು.

2020ರಲ್ಲಿ ಚೀನಾ–ಭಾರತ ಗಡಿಯಲ್ಲಿ ಪೂರ್ವ ಲಡಾಖ್‌ ಬಳಿ ಉದ್ವಿಗ್ನ ಸ್ಥಿತಿ ತಲೆದೋರಿದ್ದ ಹಿಂದೆಯೇ ನಿಷೇಧ ಹೇರಲಾಗಿತ್ತು. ಆಗ ಪ್ರಮುಖ ಆ್ಯಪ್‌ಗಳಾಗಿದ್ದ ವಿ–ಚಾಟ್, ಬಿಗೊ ಲೈವ್, ಹೆಲೊ, ಲೈಕೀ, ಕ್ಯಾಮ್‌ ಸ್ಕ್ಯಾನರ್, ವಿಗೊ ವಿಡಿಯೊ, ಎಂಐ ವಿಡಿಯೊ ಕಾಲ್‌, ಶಓಮಿ, ಕ್ಲ್ಯಾಶ್‌ ಆಪ್‌ ಕಿಂಗ್ಸ್‌ ಹಾಗೂ ಇ–ಕಾಮರ್ಸ್ ವೇದಿಕೆಗಳಾದ ಕ್ಲಬ್‌ ಫ್ಯಾಕ್ಟರಿ ಮತ್ತು ಶೀನ್‌ ಆ್ಯಪ್‌ಗಳು ನಿಷೇಧಕ್ಕೆ ಒಳಗಾಗಿದ್ದವು. ಬಳಿಕ ನಿಷೇಧಕ್ಕೆ ಒಳಗಾಗಿದ್ದ ಆ್ಯಪ್‌ಗಳನ್ನೇ ಹೋಲುತ್ತಿದ್ದ ಇತರೆ 47 ಆ್ಯಪ್‌ಗಳನ್ನೂ ನಿಷೇಧಿಸಲಾಗಿತ್ತು.

ಸರ್ಕಾರದ ಮೂಲಗಳ ಪ್ರಕಾರ, ವಿವಿಧ 54 ಆ್ಯಪ್‌ಗಳನ್ನು ನಿಷೇಧಿಸುವಂತೆಐ.ಟಿ ಸಚಿವಾಲಯಕ್ಕೆ ಕೇಂದ್ರ ಗೃಹಸಚಿವಾಲಯವು ಮನವಿ ಸಲ್ಲಿಸಿತ್ತು.ಉಲ್ಲೇಖಿತ ಆ್ಯಪ್‌ಗಳ ಮೂಲಕ ವಾಸ್ತವ ಅಂಕಿ ಅಂಶಗಳನ್ನು ವೈರಿ ದೇಶದಲ್ಲಿರುವ ಸರ್ವರ್‌ಗಳಿಗೆ ರವಾನಿಸಲಾಗುತ್ತಿದ್ದು, ಈ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.