ADVERTISEMENT

ರೈತರ ಆರ್ಥಿಕ ಸ್ಥಿತಿ ಅರಿಯಲು ಸಮೀಕ್ಷೆ

ಪಿಟಿಐ
Published 5 ಫೆಬ್ರುವರಿ 2019, 19:45 IST
Last Updated 5 ಫೆಬ್ರುವರಿ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ರೈತರ ಆದಾಯ, ಸಾಲದ ಹೊರೆ ಮತ್ತು ಇತರ ಸಮಸ್ಯೆಗಳ ಬಗ್ಗೆ ದತ್ತಾಂಶ ಕಲೆ ಹಾಕಲು ರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.

‘ಪ್ರಸ್ತಕ ಬೆಳೆ ವರ್ಷಕ್ಕೆ ಸಂಬಂಧಿಸಿದಂತೆ ಈ ಸಮೀಕ್ಷೆ ನಡೆಸಲಾಗುತ್ತದೆ’ ಎಂದು ಶೇಖಾವತ್ ತಿಳಿಸಿದ್ದಾರೆ.

ADVERTISEMENT

‘ದೇಶದ ರೈತ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಲು ಈ ಸಮೀಕ್ಷೆ ನಡೆಸಲಾಗತ್ತದೆ. 2012–13ನೇ ಸಾಲಿನಲ್ಲಿ ಇಂತಹ ಸಮೀಕ್ಷೆ ನಡೆಸಲಾಗಿತ್ತು. ಆದರೆ 2014ರಿಂದ 2018ರ ನಡುವೆ ರೈತರ ಆರ್ಥಿಕ ಸ್ಥಿತಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ದತ್ತಾಂಶ ಲಭ್ಯವಿಲ್ಲ. ಹೀಗಾಗಿ ಸಮೀಕ್ಷೆ ನಡೆಸಲಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ಕೃಷಿ ಉದ್ದಿಮೆ ಸೂಚ್ಯಂಕ

ರಾಜ್ಯಗಳಿಗೆ ‘ಕೃಷಿ ಉದ್ದಿಮೆಗಳ ಸರಾಗ ವಹಿವಾಟು’ ರ‍್ಯಾಂಕ್ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

‘ಈ ಕ್ಷೇತ್ರದಲ್ಲಿ ರಾಜ್ಯಗಳ ನಡುವೆ ಆರೋಗ್ಯಪೂರ್ಣ ಪೈಪೋಟಿ ಹೆಚ್ಚಿಸಲು ಇಂತಹ ರ‍್ಯಾಂಕ್‌ನ ಅವಶ್ಯಕತೆ ಇದೆ. ಹೀಗಾಗಿ ಕೃಷಿ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಆಯಾ ರಾಜ್ಯಗಳ ಉತ್ಪಾದನೆ, ಉತ್ಪಾದಕತ್ವ ಮತ್ತು ವಹವಾಟುಗಳ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಆ ಸೂಚ್ಯಂಕದ ಆಧಾರದಲ್ಲಿ ರ‍್ಯಾಂಕ್ ನಿರ್ಧರಿಸಲಾಗುತ್ತದೆ’ ಎಂದು ಸರ್ಕಾರವು ಹೇಳಿದೆ.

ಸಕ್ಕರೆ ಉದ್ದಿಮೆಗೆ ಕಾರ್ಯಪಡೆ:ಸಕ್ಕರೆ ಉದ್ದಿಮೆ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೀತಿ ಆಯೋಗವು ಕಾರ್ಯಪಡೆಯೊಂದನ್ನು ರಚಿಸಿದೆ.

ಸರ್ಕಾರಗಳ ಮೇಲೆಸಕ್ಕರೆ ಕಾರ್ಖಾನೆ, ಕಬ್ಬು ಬೆಳೆಗಾರರ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಪಡೆ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.