ADVERTISEMENT

‘ಮೇಡ್ ಇನ್‌ ಇಂಡಿಯಾ’ ಘೋಷಣೆ; ಕೇಂದ್ರದಿಂದ ಇಬ್ಬಗೆ ಮಾತು: ರಾಹುಲ್‌ ಗಾಂಧಿ ತರಾಟೆ

ಪಿಟಿಐ
Published 22 ಅಕ್ಟೋಬರ್ 2021, 8:33 IST
Last Updated 22 ಅಕ್ಟೋಬರ್ 2021, 8:33 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ಮೇಡ್ ಇನ್‌ ಇಂಡಿಯಾ’ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇಬ್ಬಗೆ ಮಾತುಗಳನ್ನು ಆಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಶುಕ್ರವಾರ ಟೀಕಿಸಿದ್ದಾರೆ.

ಚೀನಾದ ಜೊತೆಗಿನ ವಾಣಿಜ್ಯ ಚಟುವಟಿಕೆ ಪ್ರಮಾಣ ಕುಗ್ಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್‌ ಶ್ರೀಂಗ್ಲಾ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಚೀನಾದ ಜೊತೆಗಿನ ಭಾರತದ ವಾಣಿಜ್ಯ ವಹಿವಾಟು ಮೊದಲ 9 ತಿಂಗಳಲ್ಲಿ ಶೇ 49ರಷ್ಟು ಏರಿತ್ತು.

ಎಂದಿನಂತೆ ಇದು ಇಬ್ಬಗೆಯ ಮಾತು ಎಂದು ರಾಹುಲ್‌ ಟೀಕಿಸಿದ್ದು, ಮೇಡ್‌ ಇನ್‌ ಇಂಡಿಯಾ, ಜುಮ್ಲಾ ಹ್ಯಾಷ್‌ಟ್ಯಾಗ್‌ ಜೊತೆಗೆ ಟ್ವೀಟ್‌ ಮಾಡಿದ್ದಾರೆ. ಚೀನಾ ಜೊತೆಗಿನ ವಾಣಿಜ್ಯ ವಹಿವಾಟು ಶೇ 49ರಷ್ಟು ಏರಿಕೆಯಾಗಿದೆ ಎಂಬುದಕ್ಕೆ ಪೂರಕವಾದ ಮಾಧ್ಯಮ ವರದಿಯನ್ನು ಅವರು ಟ್ವೀಟ್‌ ಜೊತೆಗೆ ಹಂಚಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.