ADVERTISEMENT

ರಕ್ತ ಹೆಪ್ಪುಗಟ್ಟುವಿಕೆ ಚಿಕಿತ್ಸೆಗೆ ಬಳಸುವ ಔಷಧ ರಫ್ತಿಗೆ ಕೇಂದ್ರದ ನಿರ್ಬಂಧ

ಪಿಟಿಐ
Published 10 ಜನವರಿ 2022, 15:37 IST
Last Updated 10 ಜನವರಿ 2022, 15:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಕ್ತ ಹೆಪ್ಪುಗಟ್ಟುವಿಕೆಯ ಚಿಕಿತ್ಸೆಯಲ್ಲಿ ಬಳಸುವ ಔಷಧದ ರಫ್ತಿಗೆ ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಗಳನ್ನು ವಿಧಿಸಿದೆ.

'ಇಂಟ್ರಾ-ವೆನಸ್ ಇಮ್ಯುನೊಗ್ಲೊಬ್ಯುಲಿನ್’ ರಫ್ತಿನ ಮೇಲೆಯೂ ನಿರ್ಬಂಧಗಳನ್ನು ಹೇರಲಾಗಿದೆ.

ಈ ಉತ್ಪನ್ನಗಳ ರಫ್ತುದಾರರು ಈಗ ಅವುಗಳನ್ನು ಬೇರೆ ದೇಶಗಳಿಗೆ ಕಳುಹಿಸಬೇಕಿದ್ದರೆ ಸರ್ಕಾರದಿಂದ ಅನುಮತಿ ಪಡೆಯಬೇಕು ಅಥವಾ ಪರವಾನಗಿಯನ್ನು ಹೊಂದಬೇಕು ಎಂದು ಸೂಚಿಸಲಾಗಿದೆ.

ADVERTISEMENT

ಈ ಕುರಿತು ವಿದೇಶಿ ವಹಿವಾಟುಗಳ ಪ್ರಧಾನ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.