ADVERTISEMENT

ಕಸ್ಟಡಿ ಕಿರುಕುಳ ಪ್ರಕರಣ: ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್ ಭಟ್‌ ಖುಲಾಸೆ

ಪಿಟಿಐ
Published 8 ಡಿಸೆಂಬರ್ 2024, 5:54 IST
Last Updated 8 ಡಿಸೆಂಬರ್ 2024, 5:54 IST
<div class="paragraphs"><p>ಸಂಜೀವ್ ಭಟ್‌</p></div>

ಸಂಜೀವ್ ಭಟ್‌

   

ಪೋರಬಂದರ್: ಪೊಲೀಸ್ ವಶದಲ್ಲಿದ್ದ ವ್ಯಕ್ತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್‌ನ ಪೋರಬಂದರ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರ‌ಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮುಖೇಶ್ ಪಾಂಡ್ಯ, ‘ಅಪರಾಧ ಒಪ್ಪಿಕೊಳ್ಳುವಂತೆ ದೂರುದಾರನನ್ನು ಬಲವಂತಪಡಿಸಲಾಗಿದೆ ಮತ್ತು ಅಪಾಯಕಾರಿ ಆಯುಧಗಳಿಂದ ಘಾಸಿಗೊಳಿಸಲಾಗಿದೆ ಎಂಬ ಆರೋಪವನ್ನು ‌ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಆ ಸಮಯದಲ್ಲಿ(1997) ಸಾರ್ವಜನಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿಯನ್ನು(ಸಂಜೀವ್ ಭಟ್‌) ವಿಚಾರಣೆಗೆ ಒಳಪಡಿಸುವಾಗ ಅಗತ್ಯವಾದ ಮಂಜೂರಾತಿಯನ್ನು ಪಡೆದಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನ ಸೆಳೆದಿದೆ.

‘ಅಪರಾಧವನ್ನು ಒಪ್ಪಿಕೊಳ್ಳುವಂತೆ ನನಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ’ ಎಂದು ನರನ್ ಜಾಧವ್ ಎಂಬ ವ್ಯಕ್ತಿ ನೀಡಿದ್ದ ದೂರನ್ನು ಆಧರಿಸಿ ಸಂಜೀವ್ ಭಟ್ ಮತ್ತು ಪೊಲೀಸ್ ಇನ್ಸ್‌ಸ್ಪೆಕ್ಟರ್‌ ವಜುಭಾಯಿ ಚೌ ಅವರ ವಿರುದ್ಧ ಆಗ ಎಫ್‌ಐಆರ್ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.