ADVERTISEMENT

ಗುಜರಾತ್‌ನಲ್ಲಿ 8 ತಿಂಗಳಲ್ಲಿ 50 ಮಂದಿಗೆ ಮರಣದಂಡನೆ

ಗುಜರಾತ್‌ನ ವಿಚಾರಣಾಧೀನ ನ್ಯಾಯಾಲಯಗಳ ತೀರ್ಪು

ಪಿಟಿಐ
Published 19 ಸೆಪ್ಟೆಂಬರ್ 2022, 10:58 IST
Last Updated 19 ಸೆಪ್ಟೆಂಬರ್ 2022, 10:58 IST
.
.   

ಅಹಮದಾಬಾದ್‌: ಗುಜರಾತ್‌ನ ವಿಚಾರಣಾಧೀನ ನ್ಯಾಯಾಲಯಗಳು ಈ ವರ್ಷ ಎಂಟು ತಿಂಗಳಲ್ಲಿ (ಜನವರಿಯಿಂದ ಆಗಸ್ಟ್‌) ಒಟ್ಟು 50 ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಿವೆ.

2006ರಿಂದ 2011ರ ಅವಧಿಯಲ್ಲಿ ಒಟ್ಟು 46 ಜನರಿಗೆ ಮರಣ ದಂಡನೆ ವಿಧಿಸಲಾಗಿತ್ತು ಎಂಬುದು ನ್ಯಾಯಾಲಯದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

2008ರಲ್ಲಿ ಅಹಮದಾಬಾದ್‌ನಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ 38 ಅಪರಾಧಿಗಳಿಗೆ ವಿಶೇಷ ನ್ಯಾಯಾಲಯವು ಈ ವರ್ಷದ ಫೆಬ್ರುವರಿಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

ADVERTISEMENT

ಇದನ್ನು ಬಿಟ್ಟರೆಅ‍ಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಪ್ರಕರಣದಡಿ ಕೆಲ ಅಪರಾಧಿಗಳಿಗೆ ರಾಜ್ಯದ ವಿವಿಧ ನಗರಗಳ ವಿಚಾರಣಾಧೀನ ನ್ಯಾಯಾಲಯಗಳು ಮರಣ ದಂಡನೆ ಶಿಕ್ಷೆ ನೀಡಿವೆ. ಎಂಟು ತಿಂಗಳ ಅವಧಿಯಲ್ಲಿ ಮರ್ಯಾದೆ ಹತ್ಯೆ ಪ್ರಕರಣದಡಿ ಇಬ್ಬರು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.