ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಗುರುಗ್ರಾಮ: ಪೆರೋಲ್ ಮೇಲಿದ್ದ ಗುರುಗ್ರಾಮ ಮೂಲದ ಕೊಲೆ ಅಪರಾಧಿ ಮೈಪಾಲ್ ಧಿಲ್ಲಾ ಎಂಬುವನು ಕಾಂಬೋಡಿಯಾಗೆ ಪರಾರಿಯಾಗಿದ್ದ. ಇದೀಗ ಈತನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಧಿಲ್ಲಾ ವಿರುದ್ಧ ಬಹದ್ದೂರ್‌ಗಢ ಠಾಣೆಯಲ್ಲಿ ಕೊಲೆ, ಅಕ್ರಮ ಬಂದೂಕು ಬಳಕೆ, ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಈತ ಕಾಂಬೋಡಿಯಾದಲ್ಲಿ ತಲೆಮರೆಸಿಕೊಂಡಿದ್ದ.
ಅನೇಕ ಪ್ರಕರಣಗಳಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವಾಗಲೇ ಕೊಲೆ ಮಾಡಿದ ಆರೋಪವೂ ಈತನ ಮೇಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2018 ರಂದು ಧಿಲ್ಲಾ ಅವರನ್ನು ಹಿಸಾರ್ ಕೇಂದ್ರ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ನಕಲಿ ಗುರುತಿನ ಚೀಟಿ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದರು.
ಧಿಲ್ಲಾ ಅವರನ್ನು ಬಂಧಿಸುವಂತೆ ಹರಿಯಾಣ ಪೊಲೀಸರು ಸಿಬಿಐಗೆ ಮನವಿ ಮಾಡಿದ್ದರು. ತನಿಖೆ ಚುರುಕುಗೊಳಿಸಿದ ಸಿಬಿಐ, ಥಾಯ್ಲೆಂಡ್, ಬ್ಯಾಂಕಾಕ್, ಕಾಂಬೋಡಿಯ ದೇಶಗಳಿಗೆ ಆರೋಪಿಯ ಹಿನ್ನಲೆ ತಿಳಿಸಿತ್ತು.
ಧಿಲ್ಲಾ ಹಿನ್ನೆಲೆ ತಿಳಿದ ಕಾಂಬೋಡಿಯನ್ ಅಧಿಕಾರಿಗಳು ಕೊಲೆ ಆರೋಪಿಯನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.